ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ: ಶರಣಬಸಪ್ಪ

Last Updated 15 ಏಪ್ರಿಲ್ 2022, 4:12 IST
ಅಕ್ಷರ ಗಾತ್ರ

‌ಶಹಾಪುರ: ನಗರದ ಹೃದಯ ಭಾಗದಲ್ಲಿ 9 ಅಡಿ ಎತ್ತರದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಭರವಸೆ ನೀಡಿದರು.

ನಗರಸಭೆ ಆವರಣದಲ್ಲಿ ಗುರು ವಾರ ತಾಲ್ಲೂಕು ಆಡಳಿತ ಆಯೋಜಿ ಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ನಮಗೆ ಸಂವಿಧಾನವೇ ಧರ್ಮ ಗ್ರಂಥ. ಎಲ್ಲರೂ ಕೂಡಿ ಬಾಳುವ ಸಂಸ್ಕೃತಿಗೆ ದುಷ್ಟ ಶಕ್ತಿಗಳು ಹುಳಿ ಹಿಂಡುತ್ತಿವೆ. ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು ಎಂಬುವುದು ಯಾರು ಮರೆಯಬಾರದು ಎಂದು ತಿಳಿಸಿದರು.

ತಹಶೀಲ್ದಾರ್ ಮಧುರಾಜ ಕೂಡ್ಲಗಿ, ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಸಾದ್ಯಾಪುರ, ಪೌರಾಯುಕ್ತ ಓಂಕಾರ ಪೂಜಾರಿ, ತಾ.ಪಂ ಇ.ಒ ಬಸವರಾಜ ಸಜ್ಜನ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಹುತಪ್ಪ ಹವಾಲ್ದಾರ, ತಾಲ್ಲೂಕು ವೈದ್ಯಾಧಿಕಾರಿ ಡಾ. ರಮೇಶ ಗುತ್ತೇದಾರ, ಸಿಡಿಪಿಒ ಗುರುರಾಜ ಶೆಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ,ಎಸ್, ಸೂರ್ಯವಂಶಿ, ಪಿಎಸ್‌ಐ ಚಂದ್ರಕಾಂತ ಮಕಾಲೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ, ಶರಣು ದೋರನಹಳ್ಳಿ, ನೀಲಕಂಠ ಬಡಿಗೇರ, ರುದ್ರಪ್ಪ ಹುಲಿಮನಿ, ಸೈಯದ್ ಮುಸ್ತಾಫ್ ದರ್ಬಾನ, ಚಂದ್ರಶೇಖರ ಲಿಂಗದಳ್ಳಿ, ನಿಜಗುಣ ದೋರನಹಳ್ಳಿ, ಶಿವಕುಮಾರ ತಳವಾರ ಇದ್ದರು.

ಸರ್ಕಾರಿ ಸಿಬ್ಬಂದಿಯಾದ ಎಂಜಿನಿಯರ್ ರಜನಿಕಾಂತ, ಚಂದಮ್ಮ, ಹೊನ್ನಪ್ಪ ಭಜಂತ್ರಿ, ಮಾನಪ್ಪ, ಸಿದ್ದಯ್ಯ ಹೋತಪೇಟ, ಗೋಪಿಚಂದ ಚೌವಾಣ್, ನಾಗಪ್ಪ, ದಲಿತ ಮುಖಂಡರಾದ ಶಿವಪುತ್ರ ಜವಳಿ, ಬಾಬುರಾವ್ ಬೂತಾಳೆ, ಶರಣಪ್ಪ ಅಣಬಿ, ಶರಣಪ್ಪ ಕೊಂಬಿನ, ಚಂದ್ರು ಚಕ್ರವರ್ತಿ ಅವರನ್ನು ಸನ್ಮಾನಿಸಲಾಯಿತು.

ದಿಗ್ಗಿ: ದಿಗ್ಗಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯ ಕ್ರಮದಲ್ಲಿ ಮುಖಂಡರಾದ ಶಂಕರಗೌಡ ಮಾಲಿ ಪಾಟೀಲ, ದೇವೇಗೌಡ ಹಾಲ ಬಾವಿ, ಅಶೋಕ ಪ್ಯಾಟಿ, ಸಂಗನಬಸ್ಸಪ್ಪ, ರಾಮಚಂದ್ರಪ್ಪ ಮರಕಲ್, ಮಾಹಾಂತೇಶ ದೊಡಮನಿ ಇದ್ದರು.

ಕಸಾಪ: ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಲ್ಲಿ ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಮಾಲಾರ್ಪಣೆ ಮಾಡಿದರು.

ಸಂಘದ ಗೌರವ ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ, ಪತ್ರಕರ್ತ ಪ್ರಕಾಶ ದೊರೆ, ಬಸವರಾಜ ಹಿರೇಮಠ, ದೇವಿಂದ್ರಪ್ಪ ಕನ್ಯಾಕೋಳೂರು, ನಿಂಗಣ್ಣ ನಾಟೇಕಾರ್, ಶಂಕರ ಹುಲಕಲ್, ಡಾ. ಗುರುರಾಜ ಬಳೂರಗಿ, ಸುರೇಶಬಾಬು ಅರುಣಿ ಇದ್ದರು.

ವಕೀಲರ ಸಂಘ: ನಗರದ ವಕೀಲರ ಸಂಘದಲ್ಲಿ ಗುರುವಾರ ಡಾ. ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವ ಅಂಗವಾಗಿ ಡಾ.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಶಾಂತಗೌಡ ವಿ.ಪಾಟೀಲ ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿ ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT