ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಗೆ ಸಂವಿಧಾನ ದಾರಿ ದೀಪ: ಸಿದ್ದೇಶ್ವರ ಗೆರಡೆ

Last Updated 15 ಏಪ್ರಿಲ್ 2022, 4:11 IST
ಅಕ್ಷರ ಗಾತ್ರ

ನಾರಾಯಣಪುರ: ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿನ ಬಾಬಾ ಸಾಹೇಬರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ, ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಪಿಎಸ್‌ಐ ಸಿದ್ದೇಶ್ವರ ಗೆರಡೆ ಮಾತನಾಡಿ, ಅಂಬೇಡ್ಕರ್ ಅವರು ಭಾರತಕ್ಕೆ ಶೇಷ್ಠವಾದ ಸಂವಿಧಾನ ರಚಿಸಿಕೊಟ್ಟಿದ್ದಾರೆ ಎಂದರು.

ಯುವ ಮುಖಂಡ ರಮೇಶ ಕೋಳೂರ ಮಾತನಾಡಿ, ಅಂಬೇಡ್ಕರ್ ಅವರು ವಿಶ್ವ ಕಂಡ ಮಹಾನ್ ಚೇತನ. ಬಡವರ, ದೀನ ದಲಿತರ ಪಾಲಿನ ಆಶಾ ಕಿರಣರಾಗಿದ್ದಾರೆ. ಅವರಿಂದ ರಚಿಸಲ್ಪಟ್ಟ ಸಂವಿಧಾನವು ದೇಶವನ್ನು ಮುನ್ನಡೆಸಲು, ಪ್ರಗತಿ ಪಥದತ್ತ ಸಾಗಲು ದಾರಿ ದೀಪ ಎಂದು ಹೇಳಿದರು.

ಮುಖಂಡರಾದ ಬಾಲಯ್ಯ ಗುತ್ತೇದಾರ, ಚಿನ್ನಪ್ಪ ಡೊಳ್ಳಿ, ತಿಪ್ಪಣ್ಣ ಜಂಗಿನಗಡ್ಡಿ, ಗದ್ದೆಪ್ಪ, ಆಂಜನೇಯ ದೊರಿ, ಅಂದಾನಪ್ಪ ಚಿನಿವಾಲರ, ಬಸವರಾಜ ನಡುವಿನಮನಿ, ನಾಗರಾಜ ಜೂಗುರ, ಸಂತೋಷ ದೊಡಮನಿ, ಮಂಜು ಹಾದಿಮನಿ, ಯಂಕಪ್ಪ ರೋಡಲಬಂಡಾ, ಪಾಶಾ ಡ್ರೈವರ್, ರಮೇಶ ದಾಸರ ಸೇರಿದಂತೆ ಡಿಎಸ್‌ಎಸ್ ಪದಾಧಿಕಾರಿಗಳು ಇದ್ದರು.

ಸಂತೋಷ ನಿರೂಪಿಸಿ, ಸ್ವಾಗತಿಸಿದರು, ಮಂಜು ಹಾದಿಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT