ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: ಅನುರಣಿಸಿದ ಜೈಭೀಮ ಘೋಷಣೆ

Last Updated 15 ಏಪ್ರಿಲ್ 2022, 3:41 IST
ಅಕ್ಷರ ಗಾತ್ರ

ಗುರುಮಠಕಲ್: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳಲ್ಲಿ ಗುರುವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿ, ಜೈಭೀಮ ಘೋಷಣೆ ಮೊಳಗಿಸಲಾಯಿತು.

ಪಟ್ಟಣದ ತಹಶೀಲ್ದಾರ್, ಪುರಸಭೆ ಕಚೇರಿ, ಸಿಡಿಪಿಒ, ತಾಲ್ಲೂಕು ಪಂಚಾಯಿತಿ, ಪಶು ಆಸ್ಪತ್ರೆ, ಪೊಲೀಸ್ ಠಾಣೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಜಯ ಕರ್ನಾಟಕ ಸಂಘಟನೆ, ಬಿಜೆಪಿ, ಕಾಂಗ್ರೆಸ್ ಕಾರ್ಯಾಲಯ, ಎಸ್ಎಲ್‌ಟಿ ಶಿಕ್ಷಣ ಸಂಸ್ಥೆ, ಎಸ್.ವಿ. ಪಿಯು ಕಾಲೇಜ್ ಸೇರಿದಂತೆ ಹಲವೆಡೆ ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು

ಬಿಎಸ್‌ಪಿ‌ಯಿಂದ ಜಯಂತಿ ಆಚ ರಿಸಿ, ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಎಸ್‌ಪಿ ರಾಜ್ಯ ಉಸ್ತುವಾರಿ ದಿನೇಶ ಗೌತಮ, ಇಂದು ವಿಶ್ವದ 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಜನ್ಮ ದಿನ ಆಚರಣೆ ಮಾಡಲಾಗುತ್ತಿದೆ. ಅಂಬೇಡ್ಕರ್ ಕನಸು ನನಸು ಮಾಡಲುಕಾನ್ಶಿರಾಂ ಅವರು ತಮ್ಮ ಕುಟುಂಬ ಹಾಗೂ ವೈಯಕ್ತಿಕ ಜೀವನ ತೊರೆದು ಸಮಾಜಕ್ಕಾಗಿ ದುಡಿದರು ಎಂದರು.

ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಒಂದೂ ಜಿಲ್ಲೆಗೂ ವಿಶ್ವವಿದ್ಯಾಲಯಕ್ಕೂ ಅಂಬೇಡ್ಕರ್ ಅವರ ಹೆಸರು ಇಟ್ಟಿಲ್ಲ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.

ಮನುವಾದಿಗಳಿಂದ ದೇಶ ಮತ್ತು ಸಂವಿಧಾನ ರಕ್ಷಿಸಿಲು ಮುಂದಿನ ಚುನಾವಣೆಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಬಿಎಸ್‌ಪಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ವಾಸು, ಜಿಲ್ಲಾ ಘಟಕದ ಸಂಯೋಜಕ ಬಸವರಾಜ ರಾಮಸಮುದ್ರ, ಉಪಾಧ್ಯಕ್ಷ ಧನಂಜಯ, ಪ್ರಧಾನ ಕಾರ್ಯದರ್ಶಿ ಭೀಮಶಪ್ಪ ಗಾಡಧನ, ಕಾರ್ಯದರ್ಶಿ ಭೀಮು ಗಿರಿಗಿರಿ, ವಿಧಾನಸಭಾ ಘಟಕದ ಅಧ್ಯಕ್ಷ ಮಹಾದೇವಪ್ಪ ಚಪೆಟ್ಲಾ, ಉಪಾಧ್ಯಕ್ಷ ಅಬ್ಬಾಸ್ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT