ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಿಗರ ಚೌಡಯ್ಯ ಜಯಂತಿ: ಸಿದ್ಧತೆಗೆ ಸೂಚನೆ

Last Updated 5 ಜನವರಿ 2023, 5:43 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ಜನವರಿ 21ರಂದು ರಾಜ್ಯ ಮಟ್ಟದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಸಂಬಂಧ ಅಧಿಕಾರಿ, ಸಿಬ್ಬಂದಿ ಪೂರಕ ತಯಾರಿ ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 35 ಮಹನೀಯರ ಜಯಂತಿಗಳನ್ನು ಒಂದೊಂದು ಜಿಲ್ಲೆಗೆ ಒಬ್ಬ ಮಹನೀಯರಂತೆ ರಾಜ್ಯಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಿದ್ದು, ಅದರಂತೆ ನಮ್ಮ ಜಿಲ್ಲೆಯಲ್ಲಿ ರಾಜ್ಯಮಟ್ಟದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಬೇಕಿದೆ ಎಂದು ತಿಳಿಸಿದರು.

ವೇದಿಕೆ, ಕುಡಿಯುವ ನೀರು, ಉಪಹಾರ, ವಿದ್ಯುತ್, ಅಲಂಕಾರ, ಧ್ವನಿವರ್ಧಕ, ಸ್ವಚ್ಛತೆ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವುದು. ಜಿಲ್ಲಾಮಟ್ಟದ ಅಧಿಕಾರಿಗಳ ಕಡ್ಡಾಯ ಹಾಜರಿ ಮತ್ತು ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಜಯಂತಿ ಆಚರಣೆ, ನಗರದಲ್ಲಿ ಮಧ್ಯಾಹ್ನ 1 ಗಂಟೆಗೆ ಬೈಕ್ ರ‍್ಯಾಲಿ, ವಿವಿಧ ಕಲಾ ಪ್ರಕಾರಗಳ ಮೆರವಣಿಗೆಗೆ ಗಾಂಧಿ ವೃತ್ತದಿಂದ ಚಾಲನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಕಲಾತಂಡಗಳನ್ನು ಕರೆತರಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಲಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ್, ಸಹಾಯಕ ನಿರ್ದೇಶಕಿ ಉತ್ತಾರದೇವಿ, ಡಿಡಿಪಿಯು ಮರಿಸ್ವಾಮಿ ಎಂ., ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಶೇಷಲು, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ಮುಖಂಡರಾದ ಉಮೇಶ ಕೆ.ಮುದ್ನಾಳ, ನಾಗರತ್ನ ಅನಪೂರ, ಚಂದ್ರು, ಭೀಮರೆಡ್ಡಿ ಎಸ್.ಯರಗೋಳ, ಹಣಮಂತ ಮಡ್ಡಿ, ಸಾಬಣ್ಣ ಎಂ.ಬಾಡಿಯಾಳ, ಭೀಮು ಕೋಲಿ, ಶರಣು ಎಲ್ಹೇರಿ, ಮುದಕಪ್ಪ ಕಾಶಪ್ಪ ಅಂಬಿಗೇರ, ಮಹಾದೇವ ಗಣಪುರ, ಸುರೇಶ ಕೋಟಿಮನಿ, ಭೀಮಾಶಂಕರ ದೋರನಹಳ್ಳಿ, ಭಂಡಾರಪ್ಪ ನಾಟೇಕಾರ ಸುರಪುರ, ಕಾಶಪ್ಪ ಅಂಬಿಗೇರ, ರಾಮಲಿಂಗಪ್ಪ ಧರ್ಮಾಪುರ, ಶರಣು ಹೊನಗೇರಾ, ಮಹಾದೇವಪ್ಪ ಬಾವೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT