ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ: ಹೆಚ್ಚುವರಿ ಮನೆ ನಿರ್ಮಾಣ ಯೋಜನೆ ಕಾರ್ಯಗತ

ಶಹಾಪುರ ನಗರಸಭೆ ಜಿಲ್ಲೆಯಲ್ಲಿಯೇ ಪ್ರಥಮ
Published : 29 ಸೆಪ್ಟೆಂಬರ್ 2024, 6:07 IST
Last Updated : 29 ಸೆಪ್ಟೆಂಬರ್ 2024, 6:07 IST
ಫಾಲೋ ಮಾಡಿ
Comments

ಶಹಾಪುರ: ನಗರ ಪ್ರದೇಶದಲ್ಲಿ ವಾಸ ಮಾಡುವ ಹಿಂದುಳಿದ ಹಾಗೂ ಪರಿಶಿಷ್ಟರು ಸ್ವಂತ ನಿವೇಶನ ಹೊಂದಿದ್ದರೆ ಅಂತಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡುವ ವಾಜಪೇಯಿ ಹಾಗೂ ಅಂಬೇಡ್ಕರ ವಸತಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಜಿಲ್ಲೆಯ ಏಕೈಕ ನಗರಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2021-22ರ ಸಾಲಿನಲ್ಲಿ ಅಂದಿನ ಶಾಸಕ ಶರಣಬಸಪ್ಪ ದರ್ಶನಾಪುರ ಅವರು (ಬಿಜೆಪಿ ಸರ್ಕಾರ ಆಡಳಿತದಲ್ಲಿ) ನಗರಸಭೆಗೆ ಹೆಚ್ಚುವರಿಯಾಗಿ 774 ಮನೆ ನಿರ್ಮಾಣಕ್ಕೆ ಮಂಜೂರಾತಿ ತಂದಿದ್ದರು. ಸ್ವಂತ ನಿವೇಶನ ಹೊಂದಿದ್ದ ಫಲಾನುಭವಿ ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗಕ್ಕೆ ಸೇರಿದ ವ್ಯಕ್ತಿ ₹2.70ಲಕ್ಷ ಹಾಗೂ ಪರಿಶಿಷ್ಟ ಸಮುದಾಯದವರಿಗೆ ₹3ಲಕ್ಷ ಅನುದಾನ. ಒಟ್ಟು ₹21.15ಕೋಟಿ ವೆಚ್ಚದ ವಸತಿ ಯೋಜನೆ ಇದಾಗಿದೆ.

ನಗರಸಭೆಯ ಆಯ್ಕೆ ಪಟ್ಟಿಯಂತೆ ಸಾಮಾನ್ಯ ವರ್ಗಕ್ಕೆ 587 ಹಾಗೂ ಪರಿಶಿಷ್ಟರಿಗೆ 161 ಹಂಚಿಕೆಯಾಗಿದ್ದವು. ಅದರಲ್ಲಿ ಪೌರಾಡಳಿತ ಕಚೇರಿಯಿಂದ ತಾಂತ್ರಿಕ ಕಾರಣದಿಂದ 26 ಫಲಾನುಭವಿಗಳಿಗೆ ಕಾರ್ಯಾದೇಶ (ವರ್ಕ್ ಅರ್ಡರ್) ಬಂದಿಲ್ಲ ಎನ್ನುತ್ತಾರೆ ನಗರಸಭೆಯ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್.

ವಾಜಪೇಯಿ ವಸತಿ ಯೋಜನೆಯ ಅಡಿಯಲ್ಲಿ 587 ಫಲಾನುಭವಿಗಳ ಪೈಕಿ 367 ಫಲಾನುಭವಿಗಳು ಹಾಗೂ ಅಂಬೇಡ್ಕರ ವಸತಿ ಯೋಜನೆ ಅಡಿಯಲ್ಲಿ 161 ಫಲಾನುಭವಿಗಳ ಪೈಕಿ 141 ಫಲಾನುವಿಗಳು ವಿವಿಧ ಹಂತದಲ್ಲಿ ಮನೆ ನಿರ್ಮಾಣ ಕಟ್ಟಡ ಕಾರ್ಯ ನಡೆದಿದೆ. ಆಯ್ಕೆಯಾದ ಪಟ್ಟಿಯಂತೆ ಇನ್ನು ಯಾರು ಮನೆ ನಿರ್ಮಿಸಿಕೊಂಡಿಲ್ಲ ಅಂತಹ ಫಲಾನುಭವಿಗಳ ಖುದ್ದಾಗಿ ಭೇಟಿ ನೀಡಿ ಮನೆ ನಿರ್ಮಿಸಲು ಸೂಚಿಸಿದೆ. ಅಲ್ಲದೆ ಎರಡು ನೋಟಿಸ್‌ ಕೂಡಾ ಜಾರಿ ಮಾಡಲಾಗಿದೆ ಎನ್ನುತ್ತಾರೆ ಪೌರಾಯುಕ್ತ ರಮೇಶ ಬಡಿಗೇರ.

ಸುರಪುರ ನಗರಸಭೆ ಹಾಗೂ ಕಕ್ಕೇರಿ ಪುರಸಭೆಗೆ ಅಂದಿನ ಸಚಿವ ರಾಜೂಗೌಡ ಅವರು 1050 ಹೆಚ್ಚುವರಿ ಮನೆ ಮಂಜೂರಾತಿ ಮಾಡಿಸಿದ್ದರು. ಆದರೆ ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸದ ಕಾರಣ ಅನುದಾನ ಹಿಂಪಡೆದುಕೊಂಡರು. ಜಿಲ್ಲೆಯಲ್ಲಿಯೇ ನಮ್ಮ ನಗರಸಭೆಯು ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಿದ ಹೆಮ್ಮೆ ನಮಗಿದೆ ಎನ್ನುತ್ತಾರೆ ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್.

ಅಲೆಮಾರಿ ಸಮುದಾಯದವರಿಗೆ ಹಕ್ಕುಪತ್ರ 

ನಗರಸಭೆಯ ವ್ಯಾಪ್ತಿಯ ಹಳಿಸಗರದ ಮಲ್ಲಯ್ಯ ಗುಡ್ಡದ ಸರ್ವೆ ನಂಬರ್‌ 120ರಲ್ಲಿ 2 ಎಕರೆ ಜಮೀನಿನಲ್ಲಿ ಅಲೆಮಾರಿ ಸಮುದಾಯದ 45 ಫಲಾನುವಿಗಳಿಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಇನ್ನೂ 20 ಫಲಾನುಭವಿಗಳಿಗೆ ಹಕ್ಕುಪತ್ರ ತ್ವರಿತವಾಗಿ ನೀಡಲಾಗುವುದು. ನಿವೇಶನ ಪ್ರದೇಶದಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸುವ ₹4.50ಕೋಟಿ ವೆಚ್ಚದ ಕಾಮಗಾರಿ ಭರದಿಂದ ಸಾಗಿದೆ ಎಂದು ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ತಿಳಿಸಿದ್ದಾರೆ

ನಿವೇಶನ ಹೊಂದಿದ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ನೀಡಿದ ಅನುದಾನ ಸಮರ್ಪಕವಾಗಿ ಸದ್ಭಳಕೆಯಾಗಿದೆ. ಇನ್ನೂ ಮನೆ ನಿರ್ಮಿಸಿಕೊಳ್ಳದವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.
ರಮೇಶ ಬಡಿಗೇರ, ಪೌರಾಯುಕ್ತ
2021-22ರಲ್ಲಿ ಸರ್ಕಾರದಿಂದ ಹೆಚ್ಚುವರಿಯಾಗಿ 774 ಮನೆ ನಿರ್ಮಿಸಲು ಅನುದಾನ ಬಂದಿತ್ತು. ಸರ್ಕಾರದ ಮಾರ್ಗಸೂಚಿ ನಿಯಮ ಪಾಲಿಸಿದ್ದರಿಂದ ಶೇ 80 ಮನೆ ವಿವಿಧ ಹಂತದಲ್ಲಿ ನಿರ್ಮಾಣಗೊಳ್ಳುತ್ತಿವೆ.
ವಸಂತ ಸುರಪುರಕರ್, ನಗರ ಆಶ್ರಯ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT