ಆನೂರು.ಬಿ(ಸೈದಾಪುರ): ‘ಆನೂರು.ಬಿ - ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತುಕ್ಕು ಹಿಡಿದು ದುರ್ಬಲಗೊಂಡಿರುವುದರಿಂದ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಗೇಟ್ಗಳನ್ನು ದುರಸ್ತಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ್ ಆಗ್ರಹಿಸಿದ್ದಾರೆ.

ಸಮೀಪದ ಆನೂರು.ಬಿ-ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ ಅವರು, ‘ಕಳೆದ ಬಾರಿ ಪ್ರವಾಹ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಲ್ಲಾ ಗೇಟ್ಗಳನ್ನು ಎತ್ತದೆ ಬಿಟ್ಟಿದರು. ಇದರಿಂದ ಸುತ್ತತ್ತಲಿನ ಜಮೀನುಗಳಿಗೆ ನೀರು ನುಗ್ಗಿತ್ತು’ ಎಂದು ಆಕ್ರೋಶ ವ್ಯಕ್ಯಪಡಿಸಿದರು.

‘ಗೇಟ್ಗಳು ತುಕ್ಕು ಹಿಡಿದಿವೆ. ಕ್ರೈನ್ ಬಳಿಸಿದರೂ ಮೇಲೆ ಬರಲಾರದ ಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕ ನಿರ್ವಹಣೆ ಕೊರತೆಯೇ ಇದಕ್ಕೆ ಕಾರಣ. ಬೀಮಾ ನದಿ ನೀರು ಹಿಡಿದಿಡಲು ಕಟ್ಟಿರುವ ಈ ಬ್ರಿಡ್ಜ್ ಕಂ ಬ್ಯಾರೇಜ್ ಸಾವಿರಾರು ರೈತರಿಗೆ ಅನುಕೂಲವಾಗಿದೆ’ ಎಂದ ಅವರು, ‘ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದರೆ ತಕ್ಷಣವೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಗೇಟ್ಗಳ ದುರಸ್ತಿಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಹೈಡ್ರಾಲಿಕ್ ಗೇಟ್ ಅಳವಡಿಸಿ: ಆನೂರು.ಬಿ- ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ನ ನೀರು ಆಶ್ರಯಸಿಕೊಂಡು ಈ ಭಾಗದ ಜನ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೇಟ್ ತುಕ್ಕು ಹಿಡಿದು ಅಪಾರ ಪ್ರಮಾಣದ ನೀರು ಸೋರಿಕೆ ಆಗುತ್ತಿದೆ. ಕೂಡಲೇ ತುಕ್ಕು ಹಿಡಿದ ಗೇಟ್ಗಳನ್ನು ತೆರವುಗೊಳಿಸಿ ಹೊಸ ತಂತ್ರಜ್ಞಾನದ (ಹೈಡ್ರಾಲಿಕ್ ಗೇಟ್) ಅಳವಡಿಸಿ ಎಂಬುದು ರೈತರ ಒತ್ತಾಯವಾಗಿದೆ.

ಈ ವೇಳೆ ಕಲ್ಲಪ್ಪ, ಶಾಂತಪ್ಪ, ಮಾಣಿಕರಡ್ಡಿ ಪಾಟೀಲ, ಹಣಮಂತ, ಸುನೀಲ್ ಶೆಟ್ಟಿ, ಬನ್ನಪ್ಪ, ನಬಿಸಾಬ್, ಭೀಮರಾಯ, ಪವನ, ಶರಣಪ್ಪ ನಿಂಗಪ್ಪ, ಬೂದೆಪ್ಪ, ಸುರೇಶ, ರವಿ, ತಾಯಪ್ಪ, ಭರತ ಪೀರ್ ಮಹ್ಮದ್ , ದೇವಪ್ಪ, ಶಿವಾನಂದ, ಶರಣಪ್ಪ, ಚಂದ್ರು, ಶಾಂತಪ್ಪ, ಹಸೇನ್, ಗಂಗು, ಅನೀಲ್, ಭೀಮಣ್ಣ, ಮೆಹಬೂಬಸಾಬ್, ಸಾಬಣ್ಣ, ಮರಿಲಿಂಗಪ್ಪ, ಮಲ್ಲಪ್ಪ, ಪ್ರಭು, ಮರೆಪ್ಪ, ಭೀಮಾಶಂಕರ, ರೆಡ್ಡೆಪ್ಪ, ಸತೀಶ, ಮೋನಪ್ಪ, ಭಾಗಪ್ಪ, ಸಿದ್ದಪ್ಪ, ಬನ್ನಪ್ಪ, ಮಲ್ಲಪ್ಪ, ಮರಗಪ್ಪ, ದೇವಪ್ಪ, ಬನ್ನಪ್ಪ, ಕುಮಾರ, ನರಸಪ್ಪ,ಬಸಪ್ಪ, ಮಹಾದೇವಪ್ಪ, ಹಣಮಂತ, ಜಗದೀಶ, ಬನ್ನಪ್ಪ, ಸುರೇಶ, ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-30-1740543334

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.