ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಆಶನಾಳ ಗ್ರಾಮದ ನೇತಾಜಿ ಸುಭಾಶ್ಚಂದ್ರ ಬೋಸ್ ಯುವಕ ಸಂಘದ ಪದಾಧಿಕಾರಿಗಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉದ್ದ ಜಿಗಿತದಲ್ಲಿ ಸುಜಾತಾ ಪ್ರಥಮ, ಅನ್ನಪೂರ್ಣ ದ್ವಿತಿಯ ಸ್ಥಾನ ಗಳಿಸಿದ್ದಾರೆ.
ವಾಲಿಬಾಲ್‌ನಲ್ಲಿ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು. ತಂಡದ ನಾಯಕಿ ಸುಜಾತಾ, ರೇಣುಕಾ, ಅನ್ನಪೂರ್ಣ, ಐಶ್ವರ್ಯಾ, ಸಾಬಮ್ಮ, ರಕ್ಷಿತಾ, ಗಂಗಮ್ಮ, ಅಕ್ಷತಾ, ನಿರ್ಮಲಾ, ಪೂಜಾ ಅವರನ್ನೊಳಗೊಂಡ ತಂಡ ಗೆಲುವು ಸಾಧಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದೆ.
ಯುವತಿಯರ ಸಾಧನೆಗೆ ಆಶನಾಳ ಗ್ರಾಮದ ಮುಖಂಡರಾದ ಜಗದೀಶಗೌಡ ಪೊಲೀಸ ಪಾಟೀಲ, ರಾಮಸಮುದ್ರ ಗ್ರಾಪಂ ಉಪಾಧ್ಯಕ್ಷ ಆನಂದ ಸಣ್ಣ ನಾಗಪ್ಪನೋರ್, ತಂಡದ ಕೋಚ್ ಜಾವೇದ್ ಅಹ್ಮದ್, ಮುಖಂಡರಾದ ರಾಮಣ್ಣ, ಮಲ್ಲಿಕಾರ್ಜುನ, ಶಂಕ್ರಪ್ಪ, ಶಶಿ, ಖಂಡಪ್ಪ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿ ಉನ್ನತ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.