ಗುರುವಾರ , ಆಗಸ್ಟ್ 22, 2019
27 °C
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ

ವಿದ್ಯಾರ್ಥಿಗಳಿಂದ ಆಕರ್ಷಕ ಪರೇಡ್ ಪ್ರದರ್ಶನ

Published:
Updated:
Prajavani

ಯಾದಗಿರಿ: ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ವಿವಿಧ ತಂಡಗಳಿಂದ ಆಕರ್ಷಕ ಪರೇಡ್ ಪ್ರದರ್ಶನ ನಡೆಯಿತು.

ವಿದ್ಯಾರ್ಥಿನಿ ಭವ್ಯಾ ನೇತೃತ್ವದ ಹೋತಪೇಟ ಜವಾಹರ ನವೋದಯ ವಿದ್ಯಾಲಯ ಎಸ್‍ಪಿಸಿ ಬಾಲಕಿಯರು ಪ್ರಥಮ ಸ್ಥಾನ, ವಿದ್ಯಾರ್ಥಿನಿ ಸಾಬಮ್ಮ ನೇತೃತ್ವದ ಅಲ್ಲಿಪುರ ಸರ್ಕಾರಿ ಪ್ರೌಢ ಶಾಲೆಯ ಗೈಡ್ಸ್ ತಂಡ ದ್ವಿತೀಯ, ವಿದ್ಯಾರ್ಥಿನಿ ವೀಣಾ ನೇತೃತ್ವದ ನಗರದ ಕೋಲಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು.

ಆರ್‍ಎಸ್‍ಐ ಚಂದ್ರಶೇಖರ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪ್ರೊ. ಪಿಎಸ್‍ಐ ಹಣಮಂತ ನೇತೃತ್ವದಲ್ಲಿ ನಾಗರಿಕ ಪೊಲೀಸ್ ಪಡೆ, ಅಬಕಾರಿ ಎಸ್.ಐ ಸಿದ್ರಾಮಪ್ಪ ನೇತೃತ್ವದಲ್ಲಿ ಅಬಕಾರಿ ಇಲಾಖೆ ತಂಡ, ರಮೇಶಕುಮಾರ ನೇತೃತ್ವದಲ್ಲಿ ಗೃಹರಕ್ಷಕ ದಳ ತಂಡಗಳು ಪರೇಡ್ ನಡೆಸಿದವು. ಆರ್‍ಎಸ್‍ಐ ಶಿವರಾಜ ಪರೇಡ್ ಕಮಾಂಡರ್ ಆಗಿದ್ದರು. ಗಿರಿಮಲ್ಲ ಅಜೂರ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್ ಪ್ರದರ್ಶನ ನಡೆಯಿತು.

ವಿದ್ಯಾರ್ಥಿ ಈರಣ್ಣ ನೇತೃತ್ವದಲ್ಲಿ ಹೋತಪೇಟ ಜವಾಹರ ನವೋದಯ ವಿದ್ಯಾಲಯ ಎಸ್‍ಪಿಸಿ ಬಾಲಕರು, ವಿದ್ಯಾರ್ಥಿನಿ ಯಲ್ಲಮ್ಮ ನೇತೃತ್ವದಲ್ಲಿ ಯಲ್ಹೇರಿಯ ಕಸ್ತೂರಿ ಬಾ ಬಾಲಕಿಯರ ಶಾಲೆ, ಮಹೇಶ ನೇತೃತ್ವದಲ್ಲಿ ಅಲ್ಲಿಪುರ ಸರ್ಕಾರಿ ಪ್ರೌಢ ಶಾಲೆಯ ಸ್ಕೌಟ್ಸ್ ತಂಡ, ಪ್ರಜ್ವಲ್ ಕುಮಾರ ನೇತೃತ್ವದಲ್ಲಿ ಯಾದಗಿರಿ ಆದರ್ಶ ವಿದ್ಯಾಲಯ, ಖಾಸೀಮ ಅಲಿ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಸರ್ಕಾರಿ ಪ್ರೌಢಶಾಲೆ, ರೋಹನ್ ನೇತೃತ್ವದಲ್ಲಿ ಸ್ಟೇಷನ್ ಏರಿಯಾ ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಶಾಲೆ, ಅಮರೇಶ ನೇತೃತ್ವದಲ್ಲಿ ವಡಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ನಡೆಸಿದ ಪರೇಡ್ ಗಮನ ಸೆಳೆಯಿತು.

ಲ್ಯಾಪ್‍ಟಾಪ್ ವಿತರಣೆ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ರಕ್ಷಿತಾ ಹಿರೇಮಠ, ವಿದ್ಯಾಶ್ರೀ ಬೆಳ್ಳುಬ್ಬಿ, ಉಮೇಶ್ ಬೈಚಬಾಳ್ ಅವರಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರಕ್ಷಿತಾ ಹಿರೇಮಠ, ಮಿತಾಲಿ ಎಂ.ಎಚ್., ಶ್ರೀಪಾದ, ಶ್ರೇಯಸ್ ಜಿ.ಖಾನಾಪುರ ಅವರನ್ನು ಸನ್ಮಾನಿಸಲಾಯಿತು.

ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮಹಾಲಕ್ಷ್ಮೀ, ಪರಶುರಾಮ, ಫರೀನಾ ಫಾತಿಮಾ, ಎ.ಎಸ್.ವಿನುತಾ ಮತ್ತು ರಾಜ್ಯಮಟ್ಟದ 14ರ ವಯೋಮಿತಿ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂಜಾ, ಅನಿತಾ ಎನ್., ಜಗದೇವಮ್ಮ, ಅನಿತಾ ಎಚ್., ಸನಿತಾ ಅವರನ್ನು ಸನ್ಮಾನಿಸಲಾಯಿತು.

Post Comments (+)