ಬುಧವಾರ, ಮೇ 18, 2022
25 °C

ಉತ್ತಮ ಆಡಳಿತ ನೀಡಿದ್ದ ಬಾಬೂಜಿ; ಸುಬ್ಬಣ್ಣ ಜಮಖಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಡಾ. ಬಾಬು ಜಗಜೀವನರಾಂ ಅವರು ದೇಶ ಕಂಡ ಅಪರೂಪದ ನಾಯಕ. ಸಂಸದರಾಗಿ, ಸಚಿವರಾಗಿ, ಉಪಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದರು. ನೀರಾ ವರಿ ಮತ್ತು ಆಹಾರ ಸಮಸ್ಯೆಗೆ ಮೊದಲ ಆದ್ಯತೆ ನೀಡಿದ್ದರಿಂದ ಹಸಿರು ಕ್ರಾಂತಿಯ ಹರಿಕಾರ ಎಂದು ಖ್ಯಾತರಾದರು’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಾಲ್ಲೂಕು ಆಡಳಿತ ಮಂಗಳ ವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಂ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಉಪ ಖಜಾನೆ ಅಧಿಕಾರಿ ಡಾ. ಎಂ.ಎಸ್. ಶಿರವಾಳ ಉಪನ್ಯಾಸ ನೀಡಿ, ‘ಜಗಜೀವನರಾಂ ಅವರು ರಾಷ್ಟ್ರದ ಕಟ್ಟಕಡೆಯ ವ್ಯಕ್ತಿಯ ಹಿತರಕ್ಷಣೆಗಾಗಿ ಶ್ರಮಿಸಿದ್ದರು. ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಬದಲಾವಣೆಗಳನ್ನು ತಂದರು. ರಕ್ಷಣಾ ಸಚಿವರಾಗಿ ದೇಶದ ಹಿತದೃಷ್ಠಿಯಿಂದ ತೆಗೆದುಕೊಂಡ ನಿರ್ಣಯ ಮತ್ತು ಪಿಂಚಣಿ ಯೋಜನೆ ಸ್ಮರಣೀಯವಾಗಿವೆ’ ಎಂದು ಶ್ಲಾಘಿಸಿದರು.

ಅಬಕಾರಿ ಇನ್‍ಸ್ಪೆಕ್ಟರ್ ಪೂಜಾ ಖರ್ಗೆ, ಬಿಇಒ ಮಹಾದೇವರೆಡ್ಡಿ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಸಜ್ಜನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಲೀಂ ಇದ್ದರು. ಕೊಂಡಲ್ ನಾಯಕ ಸ್ವಾಗತಿಸಿದರು, ಚನ್ನಬಸು ನಿರೂಪಿಸಿ ದರು, ರವಿ ನಾಯಕ ವಂದಿಸಿದರು.

ಬಲಭೀಮನಾಯಕ ಭೈರಿಮಡ್ಡಿ, ಶರಣನಾಯಕ ಬೈರಿಮಡ್ಡಿ, ಭೀಮಣ್ಣ ಬೇವಿನಾಳ, ದುರ್ಗಪ್ಪ ಗೋಗಿಕರ್, ಯಲ್ಲಪ್ಪ ಹುಲಿಕಲ್, ಭೀಮಾಶಂಕರ ಬಿಲ್ಲವ್, ದಾನಪ್ಪ ಕಡಿಮನಿ, ವೆಂಕಟೇಶ ಹೊಸಮನಿ, ನಾಗಣ್ಣ ಕಲ್ಲದೇವನಳ್ಳಿ, ಧರ್ಮರಾಜ ಬಡಿಗೇರ, ಮಾಳಪ್ಪ ಕಿರದಳ್ಳಿ, ರಾಹುಲ ಹುಲಿಮನಿ, ಮಹೇಂದ್ರಕುಮಾರ ಬಿಲ್ಲವ್, ಶರಣಪ್ಪ ವಾಗಣಗೇರಿ, ಮಲ್ಕಯ್ಯ ತೇಲ್ಕರ್, ಹಣಮಂತ ಬಿಲ್ಲವ್, ನಾಗಪ್ಪ ವಡಿಗೇರಿ, ಹಣಮಂತ ಕಟ್ಟಿಮನಿ, ಮೂರ್ತಿ ಬೊಮ್ಮನಳ್ಳಿ, ಜಟ್ಟೆಪ್ಪ ನಾಗರಾಳ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶಾಸಕ ರಾಜೂಗೌಡ ಅವರು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಗಾಂಧಿವೃತ್ತ, ಅರಮನೆ ಮಾರ್ಗವಾಗಿ ಪಟೇಲ್ ವೃತ್ತದ ಮೂಲಕ ವಾಲ್ಮೀಕಿ ಭವನದವರೆಗೆ ಭವ್ಯ ಮೆರವಣಿಗೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.