ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಸರ್ಕಾರದ ಸೌಲಭ್ಯ ವಂಚಿತ ಬೆನಕನಹಳ್ಳಿ

Last Updated 24 ಸೆಪ್ಟೆಂಬರ್ 2020, 2:58 IST
ಅಕ್ಷರ ಗಾತ್ರ

ವಡಗೇರಾ: ‘ನಮಗೆ ಸರ್ಕಾರದಿಂದ ಮನೆ ಅಥವಾ ಶೌಚಾಲಯವಾಗಲಿ ಸಿಕ್ಕಿಲ್ಲ. ಸೌಲಭ್ಯಗಳೂ ದೊರೆತಿಲ್ಲ. ನಮ್ಮ ಪರಿಸ್ಥಿತಿ ನಮಗೆ ಗೊತ್ತು. ಈ ಅನಾರೋಗ್ಯ ಮಕ್ಕಳನ್ನು ಸಾಕಿಕೊಂಡು ಜೀವನ ನಡೆಸುವುದು ಹೇಗೆ’?

–ಇದು ತಾಲ್ಲೂಕಿನ ಬಿಳ್ಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆನಕನಹಳ್ಳಿ ಗ್ರಾಮದ ಅಬ್ದುಲ್ ನಬಿ ಅವರ ನೋವಿನ ಮಾತು. ಬೌದ್ಧಿಕ ಮತ್ತು ದೈಹಿಕವಾಗಿ ವೈಫಲ್ಯತೆಹೊಂದಿದ ನಾಲ್ಕು ಮಕ್ಕಳೊಂದಿಗೆ ಅವರು ಗುಡಿಸಲಿನಲ್ಲಿ ಜೀವನ ನಡೆಸಿದ್ದಾರೆ.

ಹೀಗೆ ಅಬ್ದುಲ್ ನಬಿ ಅವರೊಬ್ಬರೇ ಅಲ್ಲ, ಬೆನಕನಹಳ್ಳಿ ಗ್ರಾಮದ ಬಹುತೇಕ ಮಂದಿ ಇದೇ ರೀತಿ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬಹುತೇಕ ಜನರಿಗೆ ಸರಿಯಾದ ಮನೆಯ ವ್ಯವಸ್ಥೆಯಿಲ್ಲ. ಕೆಲವರಿಗೆ
ಮನೆಗಳಿದ್ದರೂ ವಾಸಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿವೆ.

‘ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಶಿಥಿಲಗೊಂಡು 9 ವರ್ಷಗಳು ಆಗಿವೆ. ಈವರೆಗೆ ಹೊಸ ಕಟ್ಟಡ ನಿರ್ಮಿಸಲಾಗಿಲ್ಲ. ಬಾಡಿಗೆ ಮನೆಯಲ್ಲೇ ನಡೆಸಲಾಗುತ್ತಿರುವ ಈ ಕೇಂದ್ರದಲ್ಲಿ 84 ಮಕ್ಕಳು ಇದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕೇಂದ್ರವಿದ್ದು, ವಿದ್ಯಾರ್ಥಿಗಳಿಗೆ ಆಟವಾಡಲು, ಪ್ರಾರ್ಥನೆ ಮಾಡಲು ಮೈದಾನ ಇಲ್ಲದಂತಾಗಿದೆ. ಆದ್ದರಿಂದ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡವನ್ನು ಬೇರೆಡೆ ನಿರ್ಮಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಕೊಳವೆಬಾವಿಯ ರಿಚಾರ್ಚ್ ಡಿಟ್ ಕಾಮಗಾರಿಯು ಸಂಪೂರ್ಣ ಕಳಪೆಯಿಂದ ಕೂಡಿದೆ. ಮೊದಲು ಸರಿಯಾಗಿ ನೀರು ಬರುತ್ತಿದ್ದವು. ಈ ಕಾಮಗಾರಿ ಮಾಡಿದ್ದರಿಂದ ಅದರಲ್ಲಿ ಕೊಳಚೆ ನೀರು ಬರುತ್ತಿವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗ್ರಾಮದಲ್ಲಿ
ಪ್ರತಿಯೊಂದು ಕಾಮಗಾರಿಯು ಅಪೂರ್ಣವಾಗಿವೆ. ಗ್ರಾಮದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕು’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT