ಬುಧವಾರ, ಫೆಬ್ರವರಿ 1, 2023
18 °C

​ವಿವಿಧೆಡೆ ಭೀಮಾ ಕೋರೆಗಾಂವ್ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ 205ನೇ ಶೌರ್ಯದಿನೋತ್ಸವ ಆಚರಿಸಲಾಯಿತು.

ಕೋಟಗೇರಾವಾಡಾ: ನಗರದ ಕೋಟಗೇರಾವಾಡದಲ್ಲಿ ಭಾನುವಾರ 205ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.

ಮುಖಂಡರಾದ ಚಂದ್ರಕಾಂತ, ಚಂದಪ್ಪ ಮುನಿಯಪ್ಪನವರ, ಸೈದಪ್ಪ ಕೂಲೂರು, ಬಸವರಾಜ, ತಾಯಪ್ಪ ಭಂಡಾರಿ, ಶಿವಕುಮಾರ, ಶಿವಾನಂದ, ಬಾಲರಾಜ ಗಿರಪ್ಪನವರ, ಅಂಜನೇಯ ಕೌಲೂರು ಇದ್ದರು.

ಗುರುಮಠಕಲ್: ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಭೀಮಾ ಕೋರೆಗಾಂವ್ ವಿಜಯೋತ್ಸವದ 205ನೇ ವರ್ಷಾಚರಣೆ ಮಾಡಲಾಯಿತು.

ಕೃಷ್ಣ ಚಪೆಟ್ಲಾ, ರಾಜು, ಶಾಂತಪ್ಪ, ಮಲ್ಲಪ್ಪ ಹಾಗೂ ಭೀಮಶಪ್ಪ ಗುಡಿಸೆ ಮಾತನಾಡಿ, 1818ರಲ್ಲಿ 2ನೇ ಬಾಜಿರಾವ ಪೇಶ್ವೆ ಆಡಳಿತದ ವಿರುದ್ಧ ಮಹರ್ ಸಮುದಾಯದ ಯೋಧರು ಹೋರಾಡಿ ಜಯಗಳಿಸಿದ ನೆನಪಿಗೆ ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಕೇವಲ ಬೆರಳೆಣಿಕೆಯ ಮಹರ್ ಯೋದರು ಸಿದ್ದನಾಕನ ನಾಯಕತ್ವದಲ್ಲಿ ಪೇಶ್ವೆ ಆಡಳಿತವನ್ನು ಸೋಲಿಸುವ ಮೂಲಕ ದಲಿತರ ಶೌರ್ಯ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿದಿದ್ದ ದಿನವನ್ನು ನಾವು ಶೌರ್ಯದಿನವೆಂದು ಆಚರಿಸುತ್ತೇವೆ. ಆ ಮೂಲಕ ದಲಿತ ಸಮುದಾಯ ಸ್ವಾಭಿಮಾನದಿಂದ ಮತ್ತು ಸಂಗಟಿತರಾಗಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.

ಈ ವೇಳೆ ಅಶೋಕ, ಲಾಲಪ್ಪ ತಲಾರಿ, ಮೊಗುಲಪ್ಪ, ಮಾಣಿಕ ಮುಕುಡಿ, ಮಲ್ಲಪ್ಪ ಯದ್ಲಾಪುರ, ರಮೇಶ ಜಾದವ, ಭೀಮಶಪ್ಪ ತಲಾರಿ, ಈರಪ್ಪ ಕರಿಗಾರ, ಹುಸೇನ ನಜರಾಪುರ, ವಿನೋದ ಯಲಾರಿ, ಮಾಣಿಕಪ್ಪ ಬೇಗಾರ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.