ಮಂಗಳವಾರ, ಜನವರಿ 25, 2022
25 °C

ಸುರಪುರ: ಬೈಕ್ ಕಳ್ಳನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ:  ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದ ಬಸವಕಲ್ಯಾಣ ತಾಲ್ಲೂಕಿನ ಬೋಸ್ಗಾ ಗ್ರಾಮದ ರಂಜಿತ ಗಣಪತಿ ಮಾನೆ ಎಂಬುವವನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

‘ಎರಡು ಬೈಕ್ ವಶಕ್ಕೆ ಪಡೆದಿದ್ದು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ’ ಎಂದು ಇನ್‍ಸ್ಪೆಕ್ಟರ್ ಸುನೀಲಕುಮಾರ ಮೂಲಿಮನಿ ತಿಳಿಸಿದ್ದಾರೆ.

ಬಸ್ ನಿಲ್ದಾಣದ ಹತ್ತಿರದ ಅಂಬೇಡ್ಕರ್ ವೃತ್ತದ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ. ಈ ಕುರಿತು ಇದೇ 24 ರಂದು ಕುಂಬಾರಪೇಟ ಕುರುಬರಗಲ್ಲಿಯ ಉತ್ತಪ್ಪ ಮಲ್ಲಪ್ಪ ಎಂಬುವವರು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಡಿವೈಎಸ್‍ಪಿ ಡಾ. ದೇವರಾಜ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ ಸುನೀಲಕುಮಾರ ಮೂಲಿಮನಿ, ಪಿಎಸ್‍ಐ ಕೃಷ್ಣಾ ಸುಬೇದಾರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮುಖ್ಯ ಪೇದೆ ಮನೋಹರ ರಾಠೋಡ್, ಪೇದೆಗಳಾದ ಬಸವರಾಜ, ಹುಸೇನ್, ಸಿದ್ರಾಮರೆಡ್ಡಿ ಪತ್ತೆಯಲ್ಲಿ ಭಾಗವಹಿಸಿದ್ದರು.

ಪೊಲೀಸ್ ತಂಡಕ್ಕೆ ಇಲಾಖೆಯಿಂದ ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.