ಗುರುವಾರ , ಮಾರ್ಚ್ 30, 2023
32 °C
ಜಿ.ಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಸಂಪಾದಿಸಿದ ಪುಸ್ತಕ

‘ಬಸವಣ್ಣನ 108 ವಚನಗಳು’ ಕೃತಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಲೋಕಸೇವಕರ ಬಡಾವಣೆಯ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ವಸತಿ ಗೃಹದ ಬಳಿ ಮುಕ್ಕಣ್ಣ ಕರಿಗಾರ ಅವರು ಸಂಪಾದಿಸಿದ ‘ಬಸವಣ್ಣನವರ 108 ವಚನಗಳು’ ಕೃತಿ ಲೋಕಾರ್ಪಣೆ ಮಾಡಲಾಯಿತು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಸಿನ್ನೂರು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಉಪಕಾರ್ಯದರ್ಶಿಯಂತ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದೂ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ನಿರಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಕರಿಗಾರ ಕಾರ್ಯ ಶ್ಲಾಘನೀಯ’ ಎಂದು ಅಭಿಪ್ರಾಯಿಸಿದರು.

‘ಪ್ರಜಾವಾಣಿ’ ದಿನಪತ್ರಿಕೆಯ ಜಿಲ್ಲಾ ವರದಿಗಾರ ಬಿ.ಜಿ.ಪ್ರವೀಣಕುಮಾರ ಮಾತನಾಡಿ, ‘ಮುಕ್ಕಣ್ಣ ಕರಿಗಾರ ಅವರು ಅಧಿಕಾರಿ ಎನ್ನುವುದಕ್ಕಿಂತ ‘ಪ್ರಜಾವಾಣಿ’ ಹಿತೈಷಿ ಓದುಗರು ಮತ್ತು ಮುಕ್ತಮನಸ್ಸಿನ ಚಿಂತಕರಾಗಿದ್ದಾರೆ. ವೇದೋಪನಿಷತ್ತುಗಳಿಂದ ಹಿಡಿದು ಆಧುನಿಕ ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ನಿಖರವಾಗಿ ಬರೆಯಬಲ್ಲ ಅವರ ಸಾಮರ್ಥ್ಯದ ಹಿಂದೆ ಅವರ ಆಳವಾದ ಅಧ್ಯಯನ ಇದೆ. ಗ್ರಾಮ ಪಂಚಾಯಿತಿಯ ಸದಸ್ಯರ ಮಾರ್ಗದರ್ಶನಕ್ಕೆ ಅವರು ಬರೆದ ಪುಸ್ತಕ ಅಧಿಕಾರದ ಮಹತ್ವ 
ತಿಳಿಸುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಯರಗೋಳ ಮಾತನಾಡಿದರು. ವಡಗೇರಾ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸಂಗವಾರ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಮುಕ್ಕಣ್ಣ ಕರಿಗಾರ ಅವರು ‘ಬಸವಣ್ಣನವರ ವ್ಯಕ್ತಿತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಬಸವಣ್ಣನವರ ಉಪಲಬ್ಧ 961 ವಚನಗಳಲ್ಲಿ 108 ವಚನಗಳನ್ನು ಕೃತಿಯಲ್ಲಿ ಪ್ರಕಟಿಸಿದ್ದೇನೆ’ ಎಂದರು. ಕರುನಾಡವಾಣಿ ಆನ್‌ಲೈನ್ ಪತ್ರಿಕೆಯ ಸಂಪಾದಕ ಬಸವರಾಜ ಕರೆಗಾರ, ಗುರುಮಠಕಲ್ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಮಲ್ಲಣ್ಣ, ಕಿಶನ್ ರಾಠೋಡ್ ಅವರು ಸ್ವಾಗತಿಸಿ, ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.