ಭಾನುವಾರ, ಮೇ 29, 2022
23 °C
ಹುಮನಾಬಾದ್ ತಹಶೀಲ್ದಾರ್ ಮೇಲಿನ ಹಲ್ಲೆಗೆ ಖಂಡನೆ

‘ನೌಕರರ ರಕ್ಷಣೆಗೆ ಪ್ರತ್ಯೇಕ ಕಾನೂನು ರಚಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಈಚೆಗೆ ಬೀದರ ಜಿಲ್ಲೆಯ ಹುಮನಾಬಾದ್ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡುವ ಮೂಲಕ ಕಂದಾಯ ಸಿಬ್ಬಂದಿಯಲ್ಲಿ ಅಭದ್ರತೆಯ ಭಾವವನ್ನು ಮೂಡಿಸಲಾಗಿದೆ. ಕಂದಾಯ ನೌಕರರ ಮೇಲೆ ಈ ರೀತಿಯ ಹಲ್ಲೆಯ ಘಟನೆಗಳು ಪುನರಾವರ್ತನೆಯಾಗುತ್ತಿವೆ. ಆದ್ದರಿಂದ ನೌಕರರ ರಕ್ಷಣೆಗಾಗಿ ಪ್ರತ್ಯೇಕವಾದ ಕಠಿಣ ಕಾನೂನು ರಚಿಸುವಂತೆ ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಕಂದಾಯ ನೌಕರರ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

ಪಟ್ಟಣದ ಪುರಸಭೆಯ ಆವರಣದಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಸಾಂಕೇತಿಕ ಪ್ರತಿಭಟನೆಯ ಮೂಲಕ ತಹಶೀಲ್ದಾರ್ ಶರಣಬಸವ ರಾಣಪ್ಪ ಅವರಿಗೆ ಮನವಿ ಪತ್ರವನ್ನು ನೀಡಿಲಾಯಿತು.

ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡಬಸವರಾಜ ಮಾತನಾಡಿ, ಈ ಹಿಂದೆ ಅಕ್ರಮ ಮರಳು ಸಾಗಾಟವನ್ನು ಮಾಡುತ್ತಿರುವವರು ರಾಯಚೂರಿನ ಮಾನ್ವಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ ಅವರ ಹತ್ಯೆ, ಬಳ್ಳಾರಿಯಲ್ಲಿ ವೆಂಕಟಸ್ವಾಮಿ ಅವರ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಗಳು ಕಂದಾಯ ನೌಕರರಲ್ಲಿ ಅಭದ್ರತೆಯ ಭಾವವನ್ನು ಮೂಡಿಸಿವೆ. ಆದ್ದರಿಂದ ಕೂಡಲೆ ಕಂದಾಯ ನೌಕರರ ರಕ್ಷಣೆಗೆ ಕಠಿಣ ಕಾನೂನು ರೂಪಿಸಬೇಕು ಎಂದರು.

ಕರ್ನಾಟಕ ರಾಜ್ಯ ಕಂದಾಯ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಸೇನರಾವ ಪಾಟೀಲ್ ಮಾತನಾಡಿ, ಕಂದಾಯ ನೌಕರರು ಚುನಾವಣೆ ಅಕ್ರಮ ತಡೆಯಿಂದ ಎಲ್ಲಾ ಜವಾಅಬ್ದಾರಿಗಳನ್ನೂ ಮಾಡುತ್ತೇವೆ. ಅಕ್ರಮ ಜಮೀನು ಒತ್ತುವರಿ ತಡೆಯಲು ಹೋದ ಕೋಲಾರದ ತಹಶೀಲ್ದಾರ್ ಹತ್ಯೆ, ಪಾಂಡವಪುರದ ಪ್ರಕರಣ ಸೇರಿದಂತೆ ಹಲವು ಘಟನೆಗಳಲ್ಲಿ ದಾಳಿ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ, ಐದು ವರ್ಷಗಳ ಗಡಿಪಾರು ಆದೇಶ, ಜೈಲು ಶಿಕ್ಷೆ ಒಳಗೊಂಡಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರೇಡ್– 2 ತಹಶೀಲ್ದಾರ್ ನರಸಿಂಹಸ್ವಾಮಿ, ಉಪತಹಶೀಲ್ದಾರ ಎಜಾಜ್ ಉಲ್ ಹಕ್, ಕಂದಾಯ ನಿರೀಕ್ಷಕ ಸುಭಾಶ, ಮಲ್ಲಿಕಾರ್ಜುನ ಇ.ಟಿ., ಶಿರಸ್ತೇದಾರ್ ಶರಣಬಸವ, ರಾಘವೇಂದ್ರ, ಪಂಪಾಪತಿ, ಅನ್ವರ್, ಮಹ್ಮದ ಹಾಜಿ, ಸೋಮಶೇಖರ, ಶಾರದಾ, ಶಾರದಾ ಕಾಕಲವಾರ, ಶ್ರೀದೇವಿ, ಮೇಘಾ, ಅರವಿಂದ, ಶರಣಪ್ಪ, ಶಿವಕುಮಾರ, ಶರತಕುಮಾರ, ಸಮೀರ, ಆನಂದ, ರಾಜು ಸೇರಿದಂತೆ ಕಂದಾಅಯ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.