ಜನರ ಪಾಲಿಗೆ ಸತ್ತಂತಿರುವ ಸರ್ಕಾರ, ಶೀಘ್ರವೇ ವಿಧಾನಸೌಧ ಮುಂದೆ ಧರಣಿ: ಯಡಿಯೂರಪ್ಪ

ಗುರುವಾರ , ಜೂನ್ 20, 2019
31 °C

ಜನರ ಪಾಲಿಗೆ ಸತ್ತಂತಿರುವ ಸರ್ಕಾರ, ಶೀಘ್ರವೇ ವಿಧಾನಸೌಧ ಮುಂದೆ ಧರಣಿ: ಯಡಿಯೂರಪ್ಪ

Published:
Updated:

ಯಾದಗಿರಿ: ಜನರ ಪಾಲಿಗೆ ರಾಜ್ಯ ಸರ್ಕಾರ ಸತ್ತಾಂಗಿದೆ. ಈ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಜನತೆ ಎದುರು ನೋಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು. 

ಯಾದಗಿರಿ ಮತಕ್ಷೇತ್ರದ ಅನವಾರ ಗ್ರಾಮದಲ್ಲಿ ಜನರಿಂದ ಅಹವಾಲು ಆಲಿಸಿ ಮಾತನಾಡಿದರು.

ಗ್ರಾಮದಲ್ಲಿ ಆರು ತಿಂಗಳಿಂದ ಅಂಗವಿಕಲರಿಗೆ, ವೃದ್ಧರಿಗೆ, ವಿಧವಾ ವೇತನ ನೀಡಿಲ್ಲ. ಹೀಗಾಗಿ ಜನರಿಗೆ ಈ ಸರ್ಕಾರ ಇದ್ದು, ಇಲ್ಲದಂತಾಗಿದೆ ಎಂದರು.

ಈ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜನರ ತೆರಿಗೆ ಹಣ ಪೋಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಹಣ ನೀಡಿಲ್ಲ ಎಂದು ದೂರಿದರು.

ವಿಧಾನಸೌಧ ಮುಂದೆ ಧರಣಿ

ಎರಡು ಮೂರು ದಿನಗಳಲ್ಲಿ ವಿಧಾನಸೌಧ ಬಳಿ ಬಿಜೆಪಿ ಸಂಸದರು, ಶಾಸಕರೊಂದಿಗೆ ರಾಜ್ಯ ಸರ್ಕಾರ ವಿರುದ್ಧ ಧರಣಿ ನಡೆಸಲಾಗುವುದು. ತಕ್ಷಣ ರಾಜ್ಯ ಸರ್ಕಾರ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಯಡಿಯೂರಪ್ಪ ಅವರು ಒತ್ತಾಯಿಸಿದರು.

ಒಂದು ವರ್ಷ ಕಳೆದರೂ ಸಾಲ‌ಮನ್ನಾ ಆಗಿಲ್ಲ. ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. 

ಗ್ರಾಮ ವಾಸ್ತವ್ಯ ಗಿಮಿಕ್

ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿರುವುದು ಗಿಮಿಕ್ ಆಗಿದೆ. ಅದರ ಬದಲಿಗೆ ಗ್ರಾಮಗಳಿಗೆ ಭೇಟಿ ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡಿಸಿ. ಅದು ಬಿಟ್ಟು ಗ್ರಾಮ ವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !