ಬುಧವಾರ, ಆಗಸ್ಟ್ 4, 2021
20 °C

ಬುದ್ಧ ಸ್ತೂಪ ಅವಶೇಷ ರಕ್ಷಣೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಸ್ಥಳದಲ್ಲಿ ಪತ್ತೆಯಾಗಿರುವ ಬುದ್ಧ ಸ್ತೂಪದ ಅವಶೇಷಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಪ್ರಬುದ್ಧ ಬುದ್ಧ ವಿಹಾರ ಸಮಿತಿ ಆಗ್ರಹಿಸಿದೆ.

ಈ ಕುರಿತು ರಾಷ್ಟ್ರಪತಿಗಳಿಗೆ ಹಾಗೂ ಪುರಾತತ್ವ ಇಲಾಖೆ ಹೆಚ್ಚುವರಿ ಡಿಜಿ ಅವರಿಗೆ ಪ್ರತ್ಯೇಕ ಮನವಿಗಳನ್ನು ಜಿಲ್ಲಾಧಿಕಾರಿ ಮುಖಾಂತರ ಸಲ್ಲಿಸಿದ ಸಮಿತಿ ಕಾರ್ಯಕರ್ತರು, ಸರ್ಕಾರ ಪ್ರಾಚೀನ ಅವಶೇಷಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವೇಳೆ ದೊರಕಿದ ಬೌದ್ಧ ಧರ್ಮದ ಅವಶೇಷಗಳು ಅಲ್ಲಿ ಬುದ್ಧ ವಿಹಾರ ಇತ್ತು ಎಂಬುದನ್ನು ಸಾಬೀತು ಪಡಿಸುತ್ತಿದ್ದು, ಪುರಾತತ್ವ ಇಲಾಖೆ ಅವಶೇಷ ದೊರೆತ ಜಾಗಗಳನ್ನು ಬೌದ್ಧ ಧರ್ಮದ ಪ್ರದೇಶವಾಗಿ ರಕ್ಷಿಸಬೇಕು ಎಂದು  ಮನವಿ ಸಲ್ಲಿಸಲಾಯಿತು.

ಶಹಾಪುರದ ಸಾರಿಪುತ್ರ ಬುದ್ಧ ವಿಹಾರ ಧಮ್ಮಗಿರಿ ಕರುಣಾನಂದ ಬಂತೇಜಿ, ಮೆತ್ತಾನಂದ ಭಂತೇಜಿ, ಮದ್ದರಕಿ ಪ್ರಬುದ್ದ ಬುದ್ಧ ವಿಹಾರ ಸಮಿತಿ ಅಧ್ಯಕ್ಷ ಬಾಬುರಾವ ಭೂತಾಳೆ, ಶಹಾಪುರ ಬುದ್ಧವಿಹಾರದ ನೀಲಕಂಠ ಬಡಿಗೇರ, ಚಂದ್ರಶೇಖರ ಬಾರಿಗಿಡ, ರಾಮಣ್ಣ ಸಾದ್ಯಾಪುರ, ಶಿವಪ್ಪ ಜುನ್ನಾ ಭೀಮರಾಯ ಹೊಸಮನಿ, ಯಾದಗಿರಿ ದಲಿತ ಮುಖಂಡರಾದ ಮರೆಪ್ಪ ಚಟ್ಟೆರಕರ್, ಮಲ್ಲಿನಾಥ ಸುಂಗಲಕರ್, ಸಂಪತ್ ಚಿನ್ನಾಕಾರ, ವಸಂತ ಸುಂಗಲಕರ್, ಗುರು ಬಾಣತಿಹಾಳ, ಭೀಮರಾವ ಭೂತಾಳೆ, ಶಶಿಧರ ಬಾರಿಗಿಡ, ಶಂಕರಾನಂದ, ಶಿವು ಈಟೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.