ಯಾದಗಿರಿ: ಜಿಲ್ಲೆಯ ದುಪ್ಪಲ್ಲಿಯಿಂದ ಯಾದಗಿರಿಗೆ ತೆರಳುವ ಬಸ್‌ನಲ್ಲಿ ಟಿಕೆಟ್ ನೀಡಲು ನಿರ್ವಾಹಕ ಸೀಟು ಮೇಲೇರಿದ ನಡೆದ ಘಟನೆ ನಡೆದಿದೆ.
ಮಹಿಳೆಯರು, ವಿದ್ಯಾರ್ಥಿಗಳು ತುಂಬಿದ್ದ ಬಸ್‌ನಲ್ಲಿ ಟಿಕೆಟ್ ನೀಡಲು ಹರಸಾಹಸ ಪಟ್ಟ ನಿರ್ವಾಹಕ ಕೊನೆಗೆ ಸೀಟು ಮೇಲೇರಿ ದಾಟುತ್ತಾ ತೆರಳಿದ್ದಾರೆ.
ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶ ಹಿನ್ನೆಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದು ಕಡೆ ಶಾಲಾ-ಕಾಲೇಜು ಆರಂಭ ಆಗಿರುವುದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಯಾಣಿಸುತ್ತಿದ್ದಾರೆ.
ಬಸ್ ಕೊರತೆಯಿಂದ ಶಾಲಾ–ಕಾಲೇಜುಗೆ ತೆರಳಲು ವಿದ್ಯಾರ್ಥಿಗಳ ಸಂಕಷ್ಟ ಪಡುತ್ತಿದ್ದು, ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.