ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತಾ ವೈದ್ಯರ ಮೇಲೆ ಹಲ್ಲೆಗೆ ಖಂಡನೆ

Last Updated 14 ಜೂನ್ 2019, 15:51 IST
ಅಕ್ಷರ ಗಾತ್ರ

ಯಾದಗಿರಿ: ಕೋಲ್ಕತ್ತಾದ ಎನ್‌ಆರ್‌ಎಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿರುವ ಅಮಾನವೀಯ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಜಿಲ್ಲಾ ಘಟಕ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಸಾವು ಬದುಕಿನ ಮಧ್ಯೆ ಹೋರಾಡುವ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರ ಮೇಲೆ ಈ ರೀತಿ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಇಂತಹ ಘಟನೆಗಳಿಂದ ವೈದ್ಯಕೀಯ ವೃತ್ತಿ ಮೇಲೆ ಪ್ರಹಾರ ಮಾಡಿದಂತಾಗುತ್ತದೆ. ತೀವ್ರ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುವ ವ್ಯಕ್ತಿಯ ರಕ್ಷಣೆಗೆ ಅಹೋರಾತ್ರಿ ಪ್ರಯತ್ನಿಸುವ ವೈದ್ಯರ ಮೇಲೆ ಇಂತಹ ಘಟನೆ ನಡೆದಿರುವುದು ಶೋಚನೀಯ’ ಎಂದು ಅವರು ತಿಳಿಸಿದರು.

‘ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೇ, ವೈದ್ಯ ಸಮೂಹ ವೃತ್ತಿಗೆ ವಿದಾಯ ಹೇಳಬೇಕಾಗುತ್ತದೆ. ಈ ಘಟನೆಯಲ್ಲಿ ಪಾಲ್ಗೊಂಡಿರುವವರನ್ನು ತಕ್ಷಣವೇ ಬಂಧಿಸಬೇಕು. ಅವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು’ ಎಂದು ಒತ್ತಾಯಿಸಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವಿಜಯಕುಮಾರ, ಕಾರ್ಯದರ್ಶಿ ಡಾ. ಪ್ರಸನ್ನ ಪಾಟೀಲ, ಡಾ. ನೀಲಮ್ಮ, ಡಾ. ಲಕ್ಷ್ಮಿ ಪಾಟೀಲ, ಡಾ. ಪ್ರೀತಿ, ಡಾ.ಪ್ರದೀಪ್ ರೆಡ್ಡಿ ಹುನಕುಂಟಿ, ಡಾ.ರಾಜೇಂದ್ರ, ಡಾ.ವೀರೇಶ ಜಾಕಾ, ಡಾ.ಸಿ.ಎಂ.ಪಾಟೀಲ, ಡಾ. ಪೂಜಾರಿ, ಡಾ. ಪ್ರಶಾಂತ ಭಾಸೂತ್ಕರ್, ಡಾ. ಮಹೇಶರೆಡ್ಡಿ, ಡಾ. ರಮಣ್ಣಗೌಡಾ, ಡಾ. ಶೃತಿ, ಡಾ. ರಾಧಿಕಾ ಮತ್ತು ಡಾ.ಸುರೇಶ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT