ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಯಂಪಾಡ ಗ್ರಾಮದಲ್ಲಿ ಶನಿವಾರ ಹನುಮಾನ ದೇಗುಲದ ಮುಂಭಾಗದ ಕಟ್ಟೆಯ ಮೇಲೆ ಕುಳಿತಿದ್ದ ಪರಿಶಿಷ್ಟರ ಮೇಲೆ ಕಬ್ಬಲಿಗ ಸಮುದಾಯದ ಗುಂಪೊಂದು
ಹಲ್ಲೆ ಮಾಡಿದ್ದು, ಇಬ್ಬರು ಗಾಯ ಗೊಂಡಿದ್ದಾರೆ.

ಗಾಜರಕೋಟ ನಿವಾಸಿ, ಸಮಾಜ ಕಲ್ಯಾಣ ಇಲಾಖೆಯ ‘ಡಿ’ ದರ್ಜೆ ನೌಕರ ಅನಿಲ್ಕುಮಾರ್ ಮತ್ತು ಸಿದ್ದಲಿಂಗಪ್ಪ ಗಾಯ ಗೊಂಡಿದ್ದು, ‘ಯಿಮ್ಸ್’ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಎಂ.ಟಿ.ಪಲ್ಲಿ ಗ್ರಾಮದ ಸಂಬಂಧಿಕರ ಮಗನ ಜವಳ ಕಾರ್ಯಕ್ರಮ ಹನುಮಾನ ಮಂದಿರದಲ್ಲಿ ನಡೆಯುತ್ತಿತ್ತು. ಬಿಸಿಲು ಹೆಚ್ಚಾಗಿದ್ದರಿಂದ ದೇಗುಲದ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದೆ. ದೇವಸ್ಥಾನದ ಪೂಜಾರಿ ಅನಂತಪ್ಪ ನನ್ನ ಬಳಿ ಬಂದು, ‘ಪರಿಶಿಷ್ಟರು ಇಲ್ಲಿ ಕೂರುವಂತಿಲ್ಲ, ಬೇರೆಡೆ ಪ್ರತ್ಯೇಕವಾದ ಕಟ್ಟೆ ಇದೆ. ಅಲ್ಲಿಯೇ ಕೂರಬೇಕು’ ಎಂದು ತಿಳಿಸಿದರು.

‘ಅಲ್ಲಿ ಬಿಸಿಲಿದೆ ಎರಡು ನಿಮಿಷ ನೆರಳಲ್ಲಿ ಕುಳಿತು ಎದ್ದು ಹೋಗುವುದಾಗಿ ಹೇಳಿದರೂ ಪೂಜಾರಿ ಕೇಳಲಿಲ್ಲ. ಅಲ್ಲಿ ಇದ್ದ ನಾಲ್ಕೈದು ಜನರನ್ನು ಕರೆದ ಪೂಜಾರಿ, ‘ಪರಿಶಿಷ್ಟರು ಬಂದು ಕಟ್ಟೆಯ ಮೇಲೆ ಕುಳಿತಿದ್ದಾರೆ’ ಎಂದು ನನ್ನ ಮೇಲೆ ಹಲ್ಲೆಗೆ ಪ್ರಚೋದಿಸಿದರು’ ಎಂದು ಗಾಯಾಳು ಅನಿಲ್ಕುಮಾರ್ ಆರೋಪಿಸಿದ್ದಾರೆ.

‘ಪ್ರಕರಣ ಸಂಬಂಧ ಪೂಜಾರಿಯನ್ನು ವಶಕ್ಕೆ ಪಡೆಯಲಾಗಿದೆ. ಲಕ್ಷ್ಮಣ, ಅನಂತಪ್ಪ, ರಮೇಶ ಸೇರಿ ಇತರರು ಹಲ್ಲೆ ಮಾಡಿದ್ದಾಗಿ ಸಂತ್ರಸ್ತರು ಹೇಳಿದ್ದಾರೆ. ಅನಿಲ್ಕುಮಾರ್ ಕಳ್ಳತನಕ್ಕೆ ಎರಡು ಬಾರಿ ದೇವಸ್ಥಾನದ ಒಳಗೆ ಹೋಗಿದ್ದಾರೆ ಎಂಬುದು ಪೂಜಾರಿಯ ಆರೋಪ. ಹೀಗಾಗಿ, ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುವುದು’ ಎಂದು ಎಸ್ಪಿ ಪೃಥ್ವಿಕ್ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.