ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವೇಶ್ವರಯ್ಯ ಕೊಡುಗೆ ಅಪಾರ’

Last Updated 16 ಸೆಪ್ಟೆಂಬರ್ 2021, 4:37 IST
ಅಕ್ಷರ ಗಾತ್ರ

ಯಾದಗಿರಿ: ‘ಪ್ರಜಾಪ್ರಭುತ್ವ ಆಶ್ರಯಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದ ರಚಿಸಿಕೊಟ್ಟಿದ್ದಾರೆ. ಅದರಂತೆ ಜೀವನಕ್ಕೆ ಆಸರೆಯಾಗಲು ಎಂಜಿನಿಯರ್‌ಗಳು ಸೂರು ನಿರ್ಮಿಸುತ್ತಿದ್ದಾರೆ’ ಎಂದು ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ ಅಭಿಪ್ರಾಯಪಟ್ಟರು.

ನಗರ ಹೊರವಲಯದ ನಿವೇದಿತಾ ಎಜುಕೇಷನ್‌ ಟ್ರಸ್ಟ್‌ ವತಿಯಿಂದ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ ಸರ್ ಎಂ.ವಿಶ್ವೇಶ್ವರಯ್ಯ ಅವರ 161ನೇ ಜನ್ಮ ದಿನದ ಅಂಗವಾಗಿ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಎಂಜಿನಿಯರ್‌ ದಿನವಾಗಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಅವರು ರಾಜ್ಯ ಮಾತ್ರವಲ್ಲದೇ ಇಡೀ ದೇಶಕ್ಕೆ ತಮ್ಮದೆಯಾ ಕೊಡುಗೆಗಳು ನೀಡಿದ್ದಾರೆ.ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡ ಬೇಕು’ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಲಕ್ಷ್ಮಿಕಾಂತ ಮಾತನಾಡಿ, ‘ಸೂರ್ಯ, ಚಂದ್ರರು ಇರುವ ತನಕ ವಿಶ್ವೇಶ್ವರಯ್ಯ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಬಡತನದಲ್ಲೇ ಜನಿಸಿದ್ದರೂ ಇಡೀ ದೇಶಕ್ಕೆ ಅನುಕ್ಕೂಲ ಆಗುವಂತಹ ಕೊಡುಗೆ ನೀಡಿದ್ದಾರೆ. ಮೈಸೂರು ರಾಜ್ಯ, ಮಹಾರಾಷ್ಟ್ರ, ಅಂದಿನ ಹೈದರಾಬಾದ್ ಸಂಸ್ಥಾನ ಸೇರಿದಂತೆ ವಿವಿಧ ಕಡೆ ಹಲವು ಸ್ಮರಣೀಯ ಕೆಲಸಗಳನ್ನು ಮಾಡಿದ್ದಾರೆ ಎಂದರು.

ಟ್ರಸ್ಟ್‌ ಅಧ್ಯಕ್ಷ ಖಂಡಪ್ಪ ದಾಸನ್‌ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆಯಿಂದ ಓದಿ ಪದವಿ ಗಳಿಸಿ ಉನ್ನತ ಹುದ್ದೆ ಪಡೆಯಬೇಕು. ಸಮಯವನ್ನು ಹಾಳು ಮಾಡಬಾರದು. ತಂದೆ ತಾಯಿ ಹೆಸರು ಉಳಿಸುವಂತೆ ಕೆಲಸ ಮಾಡಬೇಕು’ ಎಂದರು.

ಉಪನ್ಯಾಸಕರಾದ ಪ್ರಶಾಂತ, ಶಿವಶರಣ ಅವರು ವಿಶ್ವೇಶ್ವರಯ್ಯ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು.

ಈ ವೇಳೆ ಉಪನ್ಯಾಸಕರಾದ ಸೀಮಾ, ಅರುಣಾ, ಶಿಲ್ಪಾ ದಾಸನ್‌ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

'ಎಂಜಿನಿಯರ್‌ಗಳ ಸೇವೆ ಸ್ಮರಣೀಯ'

ಯಾದಗಿರಿ: ‘ದೇಶಕ್ಕೆ ಎಂಜಿನಿಯರ್‌ಗಳ ಕೊಡುಗೆ ಅಪಾರವಾಗಿದ್ದು, ಬೃಹತ್‌ ಕಟ್ಟಡ ಸೇರಿದಂತೆ ದೊಡ್ಡ–ದೊಡ್ಡ ಆಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರಿನ ಸಮಸ್ಯೆ ನೀಗಿಸಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸಿವಿಲ್ ಎಂಜಿನಿಯರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ಸರ್ ಎಂ.ವಿಶ್ವೇಶ್ವರಯ್ಯ ಅವರ 161ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನಲ್ಲಿ ಇರುವ ಕಲ್ಪನೆಗಳನ್ನು ಕಟ್ಟಡಗಳನ್ನಾಗಿ ರೂಪಿಸುವಲ್ಲಿ ಎಂಜಿನಿಯರ್‌ಗಳ ಸಾಕಷ್ಟ ಶ್ರಮ ಇರುತ್ತದೆ. ಲಕ್ಷಾಂತರ ರೈತರಿಗೆ ಅನುಕೂಲವಾಗುವಂತಹ ಬೃಹತ್ ಆಣೆಕಟ್ಟು ನಿರ್ಮಿಸಲಾಗಿದೆ. ಸರ್‌ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವು ದರ ಮೂಲಕ ಗೌರವ ಸಲ್ಲಿಸಿದರು.

ಆರ್.ಕೆ.ಸ್ಟಿಲ್‌ ಮತ್ತು ಸಿಮೆಂಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಲೋಕೋಪಯೋಗಿ ಇಲಾಖೆಯ ಎಇ ‌ಮುಕ್ತಾರ ಅಹಮ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT