ಸಿಎಂ ವಾಸ್ತವ್ಯಕ್ಕೆ ಸಿದ್ಧಗೊಂಡ ಚಂಡರಕಿ

ಶನಿವಾರ, ಜೂಲೈ 20, 2019
25 °C
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ ಜೋರು

ಸಿಎಂ ವಾಸ್ತವ್ಯಕ್ಕೆ ಸಿದ್ಧಗೊಂಡ ಚಂಡರಕಿ

Published:
Updated:
Prajavani

ಯಾದಿಗಿರಿ/ಗುರುಮಠಕಲ್: ಚಂಡರಕಿ ಗ್ರಾಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸುವ ಹಿನ್ನೆಲೆಯಲ್ಲಿ ಯಾದಗಿರಿ, ಗುರುಮಠಕಲ್‌ನಲ್ಲಿ ಬೃಹತಾಕಾರದ ಕಟೌಟ್‌ಗಳು ಸ್ವಾಗತ ಕಾಮಾನುಗಳು ಸಿದ್ಧವಾಗಿವೆ.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರಿಂದ ಅಹವಾಲು ಸ್ವೀಕರಿಸುವುದೆ ಪ್ರಮುಖ ಉದ್ದೇಶವಾಗಿದ್ದು, ಅದಕ್ಕೆ ಅನುಕೂಲವಾಗುವಂತೆ ಜಿಲ್ಲಾಡಳಿತ ತಯಾರಿಯಲ್ಲಿ ತೊಡಗಿಸಿಕೊಂಡಿದೆ.

ಸುಮಾರು 180 ಅಡಿ ಉದ್ದ 300 ಅಡಿ ಅಗಲ ವಿಸ್ತೀರ್ಣದ ಶಾಮಿಯಾನ ಹಾಕಿದ್ದು, ಮಳೆಗಾಲವಾಗಿದ್ದರಿಂದ ಒಂದು ವೇಳೆ ಮಳೆಯಾದರೂ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಶಾಮಿಯಾನದ ಮೇಲೆ ಪತ್ರಾಸ್‌ ಅಳವಡಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಕುಳಿತುಕೊಳ್ಳುವ ವೇದಿಕೆಯ ಬಲ ಬದಿಗೆ ಮೂರು ಹಂತಗಳಲ್ಲಿ ಜನರನ್ನು ಅಹವಾಲು ಸಲ್ಲಿಸುವುದಕ್ಕೆ ತೆರಳುವ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಹಂತದಲ್ಲೂ 200 ಜನರು ಕುಳಿತುಕೊಳ್ಳಲು ಅನುವಾಗುವಂತೆ ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ.

ಕಾರ್ಯಕ್ರಮಕ್ಕೆ ಅಗಮಿಸುವ ಜನರಿಗಾಗಿ 5000 ಆಸನ, ಪ್ರಮುಖರಿಗಾಗಿ ಒಂದರಲ್ಲಿ ನಾಲ್ಕು ಜನರು ಕುಳಿತುಕೊಳ್ಳ ಬಹುದಾದಂತಹ 100 ಆಸನಗಳ ವ್ಯವಸ್ಥೆ ಮಾಡುತ್ತಿರುವುದಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಮುಖ್ಯಮಂತ್ರಿಗಳು ಉಳಿದುಕೊಳ್ಳಲಿರುವ ಶಾಲೆಯಲ್ಲಿ ಹೊಸ ಶೌಚಾಲಯದ ನಿರ್ಮಾಣ ಮಾಡಲಾಗುತ್ತಿದ್ದು, ಜನರಿಗಾಗಿ ಬಯೋ ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಈಗಾಗಲೇ ಗ್ರಾಮದ ಮುಖ್ಯ ರಸ್ತೆಯು ಸಂಪೂರ್ಣ ದುರಸ್ತಿಗೊಂಡಿದ್ದು, ಗ್ರಾಮದ ಇತರೆ ರಸ್ತೆಗಳಲ್ಲಿ ಕಾಮಗಾರಿಗಳು ಜರುಗುತ್ತಿವೆ. ಗುರುಮಠಕಲ್ ಪಟ್ಟಣದ ಆರಂಭದಿಂದ ಮೊದಲುಗೊಂಡು, ಚಂಡರಕಿ ಗ್ರಾಮದಲ್ಲಿ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡಲಿರುವ ಶಾಲೆಯ ಆವರಣದವರೆಗೂ ಜೆಡಿಎಸ್ ಧ್ವಜಗಳು, ಮುಖ್ಯಮಂತ್ರಿಗಳಿಗೆ ಸ್ವಾಗತಿಸುವಂತಹ ಕಮಾನುಗಳು ರಾರಾಜಿಸುತ್ತಿವೆ.

ಯಾದಗಿರಿಯಲ್ಲಿ ನೈಟ್ರೋಜನ್ ಬಲೂನ್, ಸ್ವಾಗತ ಕಾಮಾನು, ಬೃಹತ್‌ಕಾರದ ಸಿಎಂ ಕಟೌಟ್‌ಗಳು ರಾರಾಜಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !