ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೈಎಸ್‍ಪಿ ದೇವರಾಜ್‍ಗೆ ಸಿ.ಎಂ ಪದಕ

ಪೊಲೀಸ್‌ ಇಲಾಖೆಯ ಒತ್ತುವರಿ ಜಾಗ ಹಿಂಪಡೆದು 3 ಎಕರೆಯಲ್ಲಿ ಹಣ್ಣಿನ ಮರಗಳು
Last Updated 1 ಏಪ್ರಿಲ್ 2022, 4:20 IST
ಅಕ್ಷರ ಗಾತ್ರ

ಸುರಪುರ: ಇಲ್ಲಿಯ ಡಿವೈಎಸ್‍ಪಿ ಡಾ. ಬಿ. ದೇವರಾಜ್ ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಕ್ಕೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಕೂಡ್ಲಗಿ ತಾಲ್ಲೂಕಿನ ಚಿಕ್ಕಜೋಗಿ ಹಳ್ಳಿ ತಾಂಡಾದ ದೇವರಾಜ್ ಅವರು ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2011ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 6ನೇ ಶ್ರೇಯಾಂಕ ಪಡೆದು ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ ಕೆಲವು ಗೊಂದಲಗಳಿಂದ ಆ ಬ್ಯಾಚ್‍ನ ಅಭ್ಯರ್ಥಿಗಳಿಗೆ ನೇಮಕಾತಿ ನೀಡಿರಲಿಲ್ಲ.

2014ರಲ್ಲಿ ಮತ್ತೇ ಕೆಎಎಸ್ ಬರೆದು ಡಿವೈಎಸ್‍ಪಿ ಹುದ್ದೆ ಗಿಟ್ಟಿಸಿಕೊಂಡರು. 2017ರಲ್ಲಿ ಸರ್ಕಾರದಿಂದ ನೇಮಕಾತಿ ಪತ್ರ ದೊರೆತು ಎರಡು ವರ್ಷ ತರಬೇತಿ ಮುಗಿಸಿದರು. 2020ರ ಜನವರಿಯಲ್ಲಿ ಭಾಲ್ಕಿ ಡಿವೈಎಸ್‍ಪಿಯಾಗಿ ರಾಜ್ಯ ಮೆಚ್ಚುವಂತೆ ಸೇವೆ ಮಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದೊಡ್ಡ ಡಕಾಯಿತಿ ಪ್ರಕರಣ ಬೇಧಿಸಿದ್ದರು.

ತಂದೆ ತಾಯಿಯೇ ತಮ್ಮ ಮಗಳನ್ನು ಕೊಲೆ ಮಾಡಿದ ಪ್ರಕರಣ ಪತ್ತೆ ಹಚ್ಚಿದರು. 1,000ಕ್ಕೂ ಹೆಚ್ಚು ಕೆ.ಜಿ ಗಾಂಜಾ ವಶಪಡಿಸಿಕೊಂಡು ಆರೋಪಿತರನ್ನು ಬಂಧಿಸಿದರು.

ಅಂದಿನ ಸರ್ಕರದ ಆದೇಶ ದಂತೆ ರಸ್ತೆ ಮೇಲೆ ಇರುವ ಅನಧಿಕೃತ ವೃತ್ತ, ಭಾವಚಿತ್ರಗಳನ್ನು ಆಯಾ ಸಮುದಾಯದ ಜನರ ಮನವೊಲಿಸಿ ತೆರವುಗೊಳಿಸಿದ್ದು ರಾಜ್ಯ ಮಟ್ಟದಲ್ಲಿ ಸದ್ದು ಮಾಡಿತ್ತು. ಅತಿಕ್ರಮಗೊಂಡಿದ್ದ ಪೊಲೀಸ್ ಇಲಾಖೆಯ 14 ಎಕರೆ ಜಾಗವನ್ನು ವಶಪಡಿಸಿಕೊಂಡು 3 ಎಕರೆ ಪ್ರದೇಶದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಹಿರಿಯ ಅಧಿಕಾರಿಗಳ ಮತ್ತು ಅಂದಿನ ಗೃಹ ಸಚಿವರಾಗಿದ್ದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದಿತ್ತು.

ಇಂತಹ ವಿವಿಧ ಜಟಿಲವಾದ ಪ್ರಕರಣ ಬೇಧಿಸಿದ್ದಕ್ಕೆ, ಜನರಲ್ಲಿ ಭಯ ಹುಟ್ಟಿಸುವ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಕ್ಕೆ, ದಕ್ಷ ಮತ್ತು ಪ್ರಾಮಾಣಿಕ ಕರ್ತವ್ಯಕ್ಕೆ ರಾಜ್ಯ ಸರ್ಕಾರ ಮುಖ್ಯ ಮಂತ್ರಿ ಪದಕ ನೀಡಿದೆ.

ಏ. 2ರಂದು ಪೊಲೀಸ್ ದ್ವಜ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕೋರಮಂಗಲ್ ಪೊಲೀಸ್ ಮೈದಾನದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಪದಕ ಪ್ರದಾನ ಮಾಡುವರು. ಡಾ. ದೇವರಾಜ್ ಅವರು 2021ರ ಅಕ್ಟೋಬರ್‌ನಿಂದ ಸುರಪುರ ವಿಭಾಗದ ಡಿವೈಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT