ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ: ಸಂಭ್ರಮದ ಕ್ರಿಸ್‌ಮಸ್

Last Updated 26 ಡಿಸೆಂಬರ್ 2021, 2:35 IST
ಅಕ್ಷರ ಗಾತ್ರ

ಯರಗೋಳ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಕ್ರಿಸ್‌ಮಸ್ ಹಬ್ಬವನ್ನು ಸಡಗರ,ಸಂಭ್ರಮದಿಂದ ಆಚರಿಸಲಾಯಿತು.

ಗ್ರಾಮದ ಚರ್ಚ್ ಸಭಾಂಗಣದಲ್ಲಿ ಫಾಸ್ಟರ್ ಜಾನ್ ವೆಸ್ಲಿ ಕ್ರಿಸ್ತನ ಜನ್ಮ, ಸಾಧನೆ, ಪವಾಡಗಳ ಕುರಿತು ತಿಳಿ ಹೇಳಿದರು. ಮಾನವರಾಗಿ ಬಾಳೋಣ, ಮಾನವ ಕುಲಕ್ಕಾಗಿ ಒಳಿತನ್ನು ಮಾಡೋಣ ಎಂದರು.

ಗುರುವಾರಸಂಜೆ ಸಮಯದಲ್ಲಿ ಗ್ರಾಮದ ಕ್ರೈಸ್ತರು ಮನೆಗಳಿಗೆ ತೆರಳಿ ಯೇಸು ಸ್ವಾಮಿ ಕುರಿತು ಹಾಡುಗಳನ್ನು ಹಾಡಿ ಮಕ್ಕಳಿಗೆ ರಂಜಿಸಿದರು.

ಯುವಕರು, ಯುವತಿಯರು ಬಣ್ಣದ ಉಡುಗೆಗಳನ್ನು ತೊಟ್ಟು ಸಂಭ್ರಮಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಕೋಲಾಟ, ಹಾಡು, ನೃತ್ಯ, ಜರುಗಿದವು.

ಸಮಾಜದ ಮುಖಂಡರಾದ ಗುರುಪುತ್ರ,ಅನಿಲಕುಮಾರ, ಸುನೀಲ್ ಕುಮಾರ್, ಸ್ಪಂದನಾ, ಜಾನ್ಸನ್, ರವಿಕುಮಾರ್, ಪ್ರಶಾಂತ್, ಸಂಪತ್ ಕುಮಾರಿ, ಸೇವಂತಿ ಕುಮಾರಿ, ಸುಧಾರಾಣಿ, ಅರ್ಚನಾ, ದೀಕ್ಷೆ, ಸಾಮ್ಯವೆಲ್ ಆದಿಮನಿ, ಗುಂಡಪ್ಪ, ಮೋಹನ್, ಸಣ್ಣರಾಜಪ್ಪ, ರಾಜಶೇಖರ, ಅಬ್ರಾಮ, ಸರೋಜಮ್ಮ, ರೋಜಮ್ಮ, ಸುವರ್ಣಮ್ಮ, ಕಾಂತಮ್ಮ, ವಿಜಯಕುಮಾರಿ, ಪಾಸ್ಟರ್ ವಿನಯ ವಿನ್ಸಂಟ್ ಇದ್ದರು.

ಅಲ್ಲಿಪುರ: ಗ್ರಾಮದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಿಸಲಾಯಿತು. ವಿದ್ಯುತ್ ದೀಪಗಳಿಂದ ಅಲಂಕರಿಸಿದ ಚರ್ಚ್‌ನಲ್ಲಿ ಯೇಸುಸ್ವಾಮಿ ಬಾಲ್ಯ ಜೀವನದ ಕುರಿತು ಬಿಂಬಿಸುವ ಗೋದಲಿ ನಿರ್ಮಿಸಲಾಗಿತ್ತು.

ಗ್ರಾಮದ ಕ್ರೈಸ್ತರು ರಂಗಿನ ಉಡುಗೆಗಳು ತೊಟ್ಟು ಯೇಸುಸ್ವಾಮಿ ಕುರಿತು ಪ್ರಾರ್ಥಿಸಿದರು. ಯೇಸುವಿನ ಸಾಧನೆ ಕುರಿತು ಭೋದಿಸಲಾಯಿತು. ಸಾಬಣ್ಣ ಸ್ಯಾಮ್ಯವೆಲ್, ದಂಡಪ್ಪ, ರಾಜಪ್ಪ ಇದ್ದರು.

ಯಡ್ಡಳ್ಳಿ ಗ್ರಾಮದ ಮೆಥೋಡಿಸ್ಟ್ ಚರ್ಚ್ ಸಭಾಂಗಣದಲ್ಲಿ ಯೇಸು ಸ್ವಾಮಿಯ ಕುರಿತು ಪ್ರಾರ್ಥನೆ ಮಾಡಲಾಯಿತು. ರಾಜಪ್ಪ ಆರಭೋಳ, ಮಸೇಖಪ್ಪ ರಾಮಸಮುದ್ರ, ಸಿದ್ದಪ್ಪ ನರಸಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT