ಯಾದಗಿರಿ: ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಅಭಾವದಿಂದ ಕೆಲವು ದೊಡ್ಡ ಹೋಟೆಲ್, ರೆಸ್ಟೋರೆಂಟ್ಗಳು ಪರ್ಯಾಯ ಇಂಧನವಾದ ಸೌದೆಯ ಒಲೆಗಳನ್ನು ಬಳಸಿ, ಆಹಾರದ ಮೆನುವಿನಲ್ಲಿ ಕಡಿತ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಿವೆ. ಇದರ ನಡುವೆ ಸೌದೆ ಒಲೆಯ ಹೊಗೆಯ ಮುಂದೆ ನಿಂತು ಅಡುಗೆ ಮಾಡಲು ತಯಾರಕರು ಹಿಂದೇಟು ಹಾಕುತ್ತಿದ್ದಾರೆ.

ನಗರವೂ ಸೇರಿದಂತೆ ಜಿಲ್ಲೆಯಲ್ಲಿ ನೂರಾರು ಹೋಟೆಲ್, ರೆಸ್ಟೋರೆಂಟ್, ಢಾಬಾಗಳಿವೆ. ಕೇಂದ್ರ ಸರ್ಕಾರದ ಆದೇಶದಂತೆ ಜಿಲ್ಲಾಡಳಿತವು ಶೇ 30ರಷ್ಟು ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ಸರಬರಾಜು ಮಾಡಲು ಅವಕಾಶ ಕಲ್ಪಿಸಿದೆ. ನಿತ್ಯ ಮೂರ್ನಾಲ್ಕು ಸಿಲಿಂಡರ್ಗಳನ್ನು ಬಳಕೆ ಮಾಡುವವರು ಎದುರಾಗುತ್ತಿರುವ ಕೊರತೆಯಿಂದ ಪಾರಾಗಲು ಸೌದೆಯ ಮೊರೆ ಹೋಗಿದ್ದಾರೆ.

ಹೋಟೆಲ್, ರೆಸ್ಟೋರೆಂಟ್ಗಳ ಹಿಂಬದಿ, ಇಲ್ಲವೆ ಮೂಲೆಯಲ್ಲಿ ಒಲೆಯನ್ನು ನಿರ್ಮಾಣ ಮಾಡಿ ಸೌದೆಗಳ ರಾಶಿ ಹಾಕಿ, ದೊಡ್ಡ ಪಾತ್ರೆಗಳನ್ನು ಇರಿಸಿ ಅಡುಗೆ ಮಾಡುತ್ತಿದ್ದಾರೆ. ಇಷ್ಟು ದಿನ ಸಿಲಿಂಡರ್ ಬೆಂಕಿಯಲ್ಲಿ ಅಡುಗೆ ಮಾಡಿ, ಅದಕ್ಕೆ ಹೊಂದುಕೊಂಡಿರುವ ಅಡುಗೆ ತಯಾರಕರು ಸೌದೆಯ ಒಲೆಗಳ ಮೇಲೆ ಅಡುಗೆ ಸಿದ್ಧಪಡಿಸಲು ಹಿಂದೇಟು ಹಾಕುತ್ತಿದ್ದಾರೆ.

ವಿಪರೀತ ಬಿಸಿಲು, ಸೆಕೆಯ ನಡುವೆ ಸೌದೆಯ ಒಲೆಯ ಮುಂದೆ ನಿಂತು, ಹೊಗೆಯ ನಡುವೆ ಅಡುಗೆ ತಯಾರಿಸಲು ಆಗುವುದಿಲ್ಲ. ಶ್ವಾಸಕೋಶ ಸಂಬಂಧಿತ ಸಮಸ್ಯೆಯಾಗುವುದಾಗಿ ಅಡುಗೆ ಮಾಡಲು ನಿರಾಕರಿಸುತ್ತಿದ್ದಾರೆ. ಬೆಂಕಿಯ ಮುಂದೆ ನಿಂತು ಇಡೀ ದಿನ ಅಡುಗೆ ಮಾಡುವ ಕಾರ್ಯಕ್ಕೆ ಕೆಲವೆಡೆ ಹೊರ ರಾಜ್ಯಗಳಿಂದ ಬಂದು ಇಲ್ಲಿನ ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ದುಡಿಯುತ್ತಿದ್ದಾರೆ. ಉತ್ತಮವಾಗಿ ಅಡುಗೆ ತಯಾರಿಕರು ಒಮ್ಮೆ ಬಿಟ್ಟು ಹೋದರೆ ಅವರ ಜಾಗಕ್ಕೆ ಮತ್ತೊಬ್ಬರನ್ನು ನಿಯೋಜಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಮಾಲೀಕರು.

ಒಂದು ಕಡೆ ಕೊರತೆಯಾಗಿರುವ ಸಿಲಿಂಡರ್ ಪ್ರಮಾಣವನ್ನು ಸರಿದೂಗಿಸಿಕೊಂಡು ಗ್ರಾಹಕರ ಅಭಿರುಚಿಗೆ ತಕ್ಕಂತಹ ಖಾದ್ಯಗಳು ಮೆನು ಕಾಪಾಡಬೇಕು. ಇನ್ನೊಂದು ಕಡೆ ಅಡುಗೆ ತಯಾರಕರು ಕೇಳುವ ವ್ಯವಸ್ಥೆಯೂ ಮಾಡಬೇಕು. ಮೆನು ಕಡಿತ ಮಾಡಿದರೆ ಗ್ರಾಹಕರು ತಪ್ಪುವ ಆತಂಕವಿದೆ. ಯುದ್ಧ ತಂದಿಟ್ಟ ಈ ಅನಿಶ್ಚಿತತೆ ದಿನಗಳು ಮುಗಿಯುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ದಿನದೂಡುವುದು ನಮಗೆ ಅನಿವಾರ್ಯವಾಗಿದೆ ಎನ್ನುತ್ತಾರೆ ರೆಸ್ಟೋರೆಂಟ್ ಮಾಲೀಕ.

‘ನಮ್ಮ ರೆಸ್ಟೋರೆಂಟ್ಗೆ ನಿತ್ಯ 19 ಕೆ.ಜಿ.ಯ ಮೂರು ಸಿಲಿಂಡರ್ಗಳು ಬೇಕಾಗುತ್ತದೆ. ಕೊರತೆಯನ್ನು ಸರಿದೂಗಿಸಿಕೊಳ್ಳಲು ನಾಲ್ಕೈದು ದಿನಗಳಿಂದ ಸೌದೆ ಒಲೆಯ ಮೇಲೆ ಅನ್ನ, ಸಾಂಬರ್ನಂತಹ ಪದಾರ್ಥಗಳು ಮಾಡುತ್ತಿದ್ದೇವೆ. ದಿನಕ್ಕೆ ಒಂದು ಕ್ವಿಂಟಲ್ ಸೌದೆ ಬಳಸುವುದರಿಂದ ಆಹಾರವೂ ರುಚಿಯಾಗುತ್ತದೆ, ಹಣ ಉಳಿತಾಯವೂ ಆಗುತ್ತದೆ. ಆದರೆ, ಸೌದೆ ಒಲೆಯ ಮೇಲೆ ಪೂರಿ, ಫ್ರೈಡ್ ರೈಸ್, ಗೋಬಿ ಮಂಚೂರಿಯಂತಹ ಪದಾರ್ಥಗಳು ತಯಾರಿಸಲು ಆಗುವುದಿಲ್ಲ. ಜೊತೆಗೆ ತಯಾರಕರು ತುಂಬ ಹೊತ್ತು ಒಲೆಯ ಮುಂದೆ ನಿಂತು ಅಡುಗೆ ಮಾಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಬೇಡುವ ಆಹಾರ ಪದಾರ್ಥಗಳ ತಯಾರಿಕೆಯನ್ನು ನಿಲ್ಲಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರೆಸ್ಟೋರೆಂಟ್ ಮಾಲೀಕರೊಬ್ಬರು ಅಳಲು ತೋಡಿಕೊಂಡರು.

‘ಸಿಲಿಂಡರ್ ಪೂರೈಕೆಯಲ್ಲಿ ಏರಿಕೆ’ ‘ಕಳೆದ ಎರಡ್ಮೂರು ದಿನಗಳಿಂದ ಸಿಲಿಂಡರ್ ಪೂರೈಕೆಯಲ್ಲಿ ಹೆಚ್ಚಳವಾಗಿದೆ. ನಿತ್ಯ ಸುಮಾರು 3000 ಇದ್ದದ್ದು ಈಗ 6000ಕ್ಕೆ ಏರಿಕೆಯಾಗಿದೆ. ಕೆಲವು ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ವಾಣಿಜ್ಯ ಬಳಕೆಗೆ ಅವರು ಬೇಡಿದಷ್ಟು ಸಿಲಿಂಡರ್ಗಳು ಕೊಡಲು ಆಗುವುದಿಲ್ಲ. ಎರಡು ದಿನಗಳಿಂದ ಪೂರೈಕೆಯಲ್ಲಿ 50 ಪರ್ಸೆಂಟ್ ಏರಿಕೆಯಾಗಿದೆ. ತೊಂದರೆ ಇದ್ದವರು ಆಹಾರ ಇಲಾಖೆಯ ಕಚೇರಿಗೆ ಸಂಪರ್ಕಿಸಬೇಕು. ನೋಂದಣಿ ಮಾಡಿಕೊಳ್ಳದೆ ಪರ್ಯಾಯ ಮಾರ್ಗದ ಮೂಲಕ ಪಡೆಯುತ್ತಿದ್ದವರಿಗೆ ಸಮಸ್ಯೆಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.