ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ರಸಗೊಬ್ಬರ ಪೂರೈಕೆ : ದೂರು ದಾಖಲು

Last Updated 13 ಮೇ 2022, 2:44 IST
ಅಕ್ಷರ ಗಾತ್ರ

ವಡಗೇರಾ: ಆಗ್ರೋ ಏಜೆನ್ಸಿಗೆ ನಕಲಿ ರಸಗೊಬ್ಬರ ಸರಬರಾಜು ಮಾಡಿದ ಆರೋಪದಡಿ ಮಧ್ಯವರ್ತಿ ವಿರುದ್ಧ ದೂರು ದಾಖಲಾಗಿದೆ.

ತಾಲ್ಲೂಕಿನ ಕೋನಹಳ್ಳಿ ಗ್ರಾಮದ ಕೆಬಿಎನ್ ಆಗ್ರೋ ಏಜೆನ್ಸಿಯ ಮಾಲೀಕ ಮಹಮದ್ ಹುಸೇನ್ ಹಾಗೂ ಖಾಜಾ ಹುಸೇನಿ ಅವರುಮಧ್ಯವರ್ತಿ ಸಾಬಣ್ಣ ನಾಗನಟಗಿ ಅವರಿಗೆ ಮೊಬೈಲ್‌ ಮೂಲಕ ಸಂಪರ್ಕಿಸಿ, ಮಂಗಳ ಡಿಎಪಿ ರಸಗೊಬ್ಬರ ಕೋಡಿಸುವಂತೆ ಬೇಡಿಕೆ ಇರಿಸಿದ್ದರು. ಮುಂಗಡವಾಗಿ ₹2 ಲಕ್ಷ ಸಹ ಅವರ ಖಾತೆಗೆ ಜಮೆ
ಮಾಡಿದ್ದರು. ಮೇ 7ರಂದು ಮಧ್ಯವರ್ತಿಯು 130 ಮೂಟೆ ರಸಗೊಬ್ಬರ ಕಳುಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವಾಹನದಿಂದ ಗೊಬ್ಬರ ಇಳಿಸಿಕೊಳ್ಳುವಾಗಿ ಮೂಟೆ ನೋಡಿದ ಏಜೆನ್ಸಿ ಮಾಲೀಕರಿಗೆ ಮಂಗಳ ಡಿಎಪಿಯಂತೆ ಕಾಣಿಸಿದೆ. ಬಳಿಕ ಪರಿಶೀಲಿಸಿದಾಗ ನಕಲಿ ಗೊಬ್ಬರ ಎಂಬುವುದು ತಿಳಿದುಬಂದಿದೆ. ಈ ಬಗ್ಗೆ ಕೆಬಿಎನ್ ಆಗ್ರೋ ಏಜೆನ್ಸಿಸ್ ಮಾಲೀಕರು ವಡಗೇರಾ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

‘ದೂರಿನ ಅನ್ವಯ ₹5 ಲಕ್ಷ ಮೊತ್ತದ 130 ಮೂಟೆ ನಕಲಿ ಡಿಎಪಿ ರಸಗೊಬ್ಬರ, ಎರಡು ವಾಹನ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ತನಿಖೆ ಸಹ ನಡೆಯುತ್ತಿದೆ’ ಎಂದು ಪಿಎಸ್ಐ ಬಾಷುಮೀಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT