ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಸಿಕಾಕರಣ: 15 ದಿನದಲ್ಲಿ ಪ್ರಗತಿ ಸಾಧಿಸಿ’

ಶಹಾಪುರ, ವಡಗೇರಾ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ
Last Updated 4 ಡಿಸೆಂಬರ್ 2021, 2:31 IST
ಅಕ್ಷರ ಗಾತ್ರ

ಭೀಮರಾಯನಗುಡಿ(ಶಹಾಪುರ): ಕೊವಿಡ್ ಲಸಿಕೆ ಪಡೆಯುವಂತೆ ಪ್ರೇರಣೆ ನೀಡಲು ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು, ಗ್ರಾಮಲೆಕ್ಕಿಗರು, ಆರೋಗ್ಯ ಇಲಾಖೆ ಅಧಿಕಾರಿಗಳು, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸಹಕಾರಗಳಿಂದ ನಿಗದಿತ ಗುರಿಯತ್ತ ಪ್ರಯತ್ನ ಮಾಡಬೇಕು. 15 ದಿನದೊಳಗೆ ಗುರಿ ಸಾಧಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ತಿಳಿಸಿದರು.

ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಹಾಪುರ ಮತ್ತು ವಡಗೇರಾ ತಾಲೂಕು ಮಟ್ಟದ ಕೋವಿಡ್ ಲಸಿಕಾಕರಣ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸತತವಾಗಿ ಶ್ರಮಿಸುತ್ತಿದೆ. ಲಸಿಕಾಕರಣದ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಾಗಿದೆ. ಅವರು ಸಹಕಾರ ಕೊಟ್ಟರೆ ಮಾತ್ರ 3 ನೇ ಅಲೆ ತಡೆಯಲು ಸಾಧ್ಯ. ಈಗಾಗಲೇ ಜಿಲ್ಲೆಯಲ್ಲಿ ಲಸಿಕಾಕರಣ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದರು.

ಹಲವರಿಗೆ ಲಸಿಕಾಕರಣ ನಂತರ ಮೈ, ಕೈ ನೋವು ಸಹಜವಾಗಿ ಕಾಣುತ್ತದೆ. ಮದ್ಯಪಾನ ಸೇವಿಸುವರು ಅಡ್ಡ ಪರಿಣಾಮಗಳು ಆಗಬಹುದೆಂದು ಲಸಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಖಂಡಿತವಾಗಿಯೂ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಇಲ್ಲಿಯವರೆಗೆ ಲಸಿಕೆ ಪಡೆದವರು ಸುರಕ್ಷಿತವಾಗಿದ್ದಾರೆ .ಎರಡು ಡೋಸ್ ಲಸಿಕೆ ಪಡೆದವರು ಕೋವಿಡ್ ಬಂದರೂ ಮರಣಹೊಂದಿಲ್ಲ ಎಂದು ಜನರಿಗೆ ತಿಳಿಸಬೇಕು ಎಂದರು.

ವಡಗೇರಾ ಮತ್ತು ಶಹಾಪುರ ತಾಲೂಕಿನ ದೋರನಹಳ್ಳಿ, ಬೆಂಡೆಬೆಂಬಳಿ, ಚಾಮನಾಳ, ಹಾಗೂ ಶಹಾಪುರ, ಚಟ್ನಳ್ಳಿ, ಗೋಗಿ, ಹತ್ತಿಗೂಡೂರು, ಹೈಯಾಳ ಬಿ, ಕುರಕುಂದಾ, ಸಗರ, ಶಿರವಾಳ, ತಡಿಬಿಡಿ, ವನದುರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗಳಲ್ಲಿ ಒಟ್ಟು 2,59,915 ಅರ್ಹ ಫಲಾನುಭವಿಗಳು ಇದ್ದಾರೆ. ಇಲ್ಲಿಯವರೆಗೆ 2,32,721 ಜನರಿಗೆ ಮೊದಲ ಡೋಸ್ ಶೇ 90 ಮತ್ತು 1,33,051 ಜನರಿಗೆ ಹಾಗೂ ಎರಡನೇ ಡೋಸ್ ಶೇ 57 ರಷ್ಟು ಲಸಿಕೆ ನೀಡಲಾಗಿದೆ ಎಂದು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಭಗವಂತ ಅನ್ವರ, ತಹಶೀಲ್ದಾರ ಮಧುರಾಜ್, ವಡಿಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ, ಶಹಾಪುರ ವೈದ್ಯಾಧಿಕಾರಿ ರಮೇಶ ಗುತ್ತೇದಾರ ಹಾಗೂ ಪ್ರಮುಖರು ಇದ್ದರು.

ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಶಹಾಪುರ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 100 ಬೆಡ್‌ಗಳ ಹಾಸಿಗೆ ಮತ್ತು 10 ಐಸಿಯೂ ಹಾಸಿಗೆಗಳು ಹಾಗೂ 19 ಎಚ್‌ಡಿಸಿ ಹಾಸಿಗೆಗಳ ತಯಾರಿ ನಡೆಯುತ್ತಿದೆ. ಆಸ್ಪತ್ರೆಯಲ್ಲಿ 100 ಆಮ್ಲಜನಕ ಬೆಡ್ ಸೇರಿದಂತೆ ಪೂರ್ವ ಕಾರ್ಯ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ತಿಳಿಸಿದರು.

ನಗರದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಕೊವಿಡ್ ಬೆಡ್ ಕುರಿತು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು .

ಈಗಾಗಲೆ ಆಕ್ಷಿಸಜನ್ ಪೈಪಲೈನ್ ಸಂಪರ್ಕ ಕಾರ್ಯ ಮುಗಿದಿದೆ. 180 ಸಿಲೆಂಡರ್ ಕಾಯ್ದಿರಿಸಲಾಗಿದೆ. ಪ್ರತಿ ಬೆಡ್ ಕೊಣೆಗಳಲ್ಲಿ ಸ್ವಚ್ಛತೆ ಮತ್ತು ಸಣ್ಣ ಪುಟ್ಟ ದುರಸ್ತಿಗಳ ಕೆಲಸ ಕೈಗೊಳ್ಳಲಾಗಿದೆ ಎಂದರು.

ಒಮೈಕ್ರಾನ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರನ್ನು ತುರ್ತಾಗಿ ಗುತ್ತಿಗೆ ಆಧಾರದಲ್ಲಿ ತಕ್ಷಣ ಭರ್ತಿ ಮಾಡಿಕೊಳ್ಳಬೇಕು. ಖಾಲಿ ಇರುವ 3 ವೈದ್ಯರು, ಮತ್ತು 25 ಡಿ ಗ್ರೂಪ್ ಸಿಬ್ಬಂದಿಯವರನ್ನು ತಕ್ಷಣವೇ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT