ಯಾದಗಿರಿ: ತಂಜಿಮ್ ಉಲ್ ಮುಸ್ಲೆಮಿನ್ ಮತ್ತು ಬೈತುಲ್ ಮಾಲ್ ಜಿಲ್ಲಾ ಅಧ್ಯಕ್ಷ, ನಗರದ ಕಾಂಗ್ರೆಸ್ ಮುಖಂಡ ಲಾಯಕ್ ಹುಸೇನ್ ಬಾದಲ್ (69) ಹೃದಯಾಘಾತದಿಂದ ಮಂಗಳವಾರ ನಿಧನರಾದರು.
ಮೃತರಿಗೆ ಪತ್ನಿ, ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.
ಅಂತ್ಯಕ್ರಿಯೆ ಪ್ರಾರ್ಥನೆಯನ್ನು ಮಂಗಳವಾರ ಸಂಜೆ 5 ಗಂಟೆಗೆ ಅಸರ್ ಮಸೀದಿ ಚೌಕ್ ಹುಸೇನಿ ಆಲಂ ಗಾಂಧಿ ಚೌಕ್ ಸಮೀಪ ಸಲ್ಲಿಸಲಾಗುವುದು. ಹಜರತ್ ಸೈಯದ್ ಶಾ ಜೀವನ್ ಶಾ ಖಬರಸ್ತಾನ್ ದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.