ಸೋಮವಾರ, ಆಗಸ್ಟ್ 8, 2022
22 °C

ಬಡವರ ರಕ್ತ ಹೀರುವ ಸರ್ಕಾರ: ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ  ಸಮೀಪದ ಕುಂಬಾರಪೇಟೆಯ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಜನ ಸಾಮಾನ್ಯರ, ಬಡವರ, ರೈತರ ಪರ ಇರುವ ಸರ್ಕಾರವಲ್ಲ. ಬಡವರ ರಕ್ತ ಹೀರುವ ಸರ್ಕಾರ. ಜನ ಕೊರೊನಾ ಸಂಕಷ್ಟದಿಂದ, ಸಾವು-ನೋವಿನಿಂದ, ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟು ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಿಸಿದರೆ ಬಡವರು ಬದುಕುವುದು ಹೇಗೆ’ ಎಂದು ಪ್ರಶ್ನಿಸಿದರು.

ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ ಮಾತನಾಡಿದರು.

ಮುಖಂಡರಾದ ವೆಂಕೋಬ ಯಾದವ, ವಿಠ್ಠಲ್ ಯಾದವ, ರಾಜಾ ವಾಸುದೇವ ನಾಯಕ, ರಾಜಾ ವೇಣುಗೋಪಾಲ ನಾಯಕ, ರಾಜಾ ಸಂತೋಷ ನಾಯಕ, ಗೋಪಾಲದಾಸ್ ಲಡ್ಡಾ, ಮಲ್ಲಣ್ಣ ಸಾಹುಕಾರ ಮುಧೋಳ, ಅಬ್ದುಲ್ ಅಲಿಂ ಗೋಗಿ, ಸೋಮನಾಥ ಡೋಣ್ಣಿಗೇರಿ, ನಾಸೀರ್ ಕುಂಡಾಲೆ, ಜುಮ್ಮಣ್ಣ ಏಳುರೊಟ್ಟಿ, ಅಬ್ದುಲ್ ಗಫರ್ ನಗನೂರಿ, ಶೇಖ್ ಮಹಿಬೂಬ ಒಂಟಿ, ಖಮರುದ್ದಿನ, ಧರ್ಮರಾಜ, ವೆಂಕಟೇಶ ಹೊಸಮನಿ, ಶರಣಪ್ಪ ಕಳ್ಳಿಮನಿ, ರಾಜಾ ಕೃಷ್ಣದೇವರಾಯ ನಾಯಕ, ಮಹಿಬೂಬ್, ವೆಂಕಟರಡ್ಡಿ, ಮನೋಹರ ಕುಂಟೋಜಿ, ಭೀಮುನಾಯಕ ಮಲ್ಲಿಭಾವಿ, ದಾವುದ್ ಪಠಾಣ, ನಿಂಗಣ್ಣ ಐಕೂರ, ಪ್ರಶಾಂತ ಸಾಹು ಮುದ್ನೂರ, ವೆಂಕಟೇಶ ನಾಯಕ ಸತ್ಯಂಪೇಟೆ, ನಾಗಪ್ಪ ಕಟ್ಟಿಮನಿ, ಅಬೀದ್ ಹುಸೇನ್, ಶೇಖರಾಜ ಮೊಹ್ಮದ್, ಮಲ್ಲಣ್ಣ ಹುಬ್ಬಳ್ಳಿ, ಹಣಮಂತ ಕಟ್ಟಿಮನಿ, ಆರ್.ಎಮ್.ಕುಲಕರ್ಣಿ, ವೆಂಕಟೇಶ ನಾಯಕ, ಪ್ರಶಾಂತ ಉಗ್ರಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು