‘ಸಮಾಜಕ್ಕೆ ಕೊಡುಗೆ ನೀಡಿ’

7

‘ಸಮಾಜಕ್ಕೆ ಕೊಡುಗೆ ನೀಡಿ’

Published:
Updated:
Deccan Herald

ಸುರಪುರ: ‘ವ್ಯಕಿತ್ವ ಜೀವಾತವಧಿಯಲ್ಲಿ ಅದು ಗೋಚರಿಸುವುದಿಲ್ಲ. ನಮ್ಮಿಂದ ದೂರವಾದಾಗ ಆ ವ್ಯಕ್ತಿಯ ಮೌಲ್ಯ ನಮ್ಮ ಅರಿವಿಗೆ ಬರುತ್ತದೆ’ ಎಂದು ಮುಖಂಡ ಗೋವಿಂದರಾವ ಕುಲಕರ್ಣಿ ಹೇಳಿದರು.

ತಾಲ್ಲೂಕಿನ ಆಲ್ದಾಳ ಗ್ರಾಮದಲ್ಲಿ ಹುದ್ದಾರ ಕುಟುಂಬದವರು ಮಂಗಳವಾರ ಏರ್ಪಡಿಸಿದ್ದ ದಿವಂಗತ ಆನಂದ ಸಾಹು ಹುದ್ದಾರ ಅವರ 8ನೇ ವರ್ಷದ ಸ್ಮರಣೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆನಂದ ಸಾಹುಕಾರ ಅವರಲ್ಲಿದ್ದ ಸಮಾಜದ ಬಗೆಗಿನ ಕಳಕಳಿ, ಸೇವಾ ತುಡಿತ ಅನುಕರಣೀಯವಾಗಿದೆ. ಅವರ ನೇರ ನುಡಿ, ದಿಟ್ಟತನ, ಔದಾರ್ಯ ಯುವಕರಿಗೆ ಪ್ರೇರಣೆಯಾಗಿದ್ದು ಅವರ ಸಮಾಜ ಸೇವೆ ಆದರ್ಶಪ್ರಾಯವಾಗಿದೆ’ ಎಂದು ಶ್ಲಾಘಿಸಿದರು.

‘ಸಮಾಜ ನನಗೇನು ಕೊಟ್ಟಿತು ಎನ್ನುವುದಕ್ಕಿಂತ ಪ್ರತಿಯಾಗಿ ಸಮಾಜಕ್ಕೆ ನಾನೇನು ಕೊಟ್ಟೆ ಎನ್ನುವುದು ಮುಖ್ಯ ಈ ನಿಟ್ಟಿನಲ್ಲಿ ದಿವಂಗತ ಆನಂದ ಸಾಹು ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ. ಸ್ವಾರ್ಥ ಬದಿಗಿಟ್ಟು ಪರಹಿತಕ್ಕಾಗಿ ಶ್ರಮಿಸಿದ ಅವರ ಬದುಕು ಅನನ್ಯ’ ಎಂದು ಮುಖಂಡ ರಮೇಶ ದೊರೆ ಹೇಳಿದರು.

‘ಪ್ರತಿ ವ್ಯಕ್ತಿಯ ವ್ಯಕ್ತಿತ್ವದ ಹಿಂದೆ ಸಮಾಜದ ಪಾತ್ರ ಅಡಗಿರುತ್ತದೆ. ಅದನ್ನು ತೀರಿಸಲು ಸಮಾಜಕ್ಕೆ ಏನಾದರೂ ಒಂದಿಷ್ಟು ಸೇವೆ ನೀಡುವ ಮೂಲಕ ಋಣ ಮುಕ್ತರಾಗುವುದು ಪ್ರತಿಯೊಬ್ಬರ ಕರ್ತವ್ಯ. ಸಮಾಜದಲ್ಲಿ ಕೆಲವರು ಇದ್ದು ಸತ್ತಂತೆ ಬದುಕುತ್ತಾರೆ. ಇನ್ನೂ ಕೆಲವರು ಸತ್ತು ಇದ್ದಂತೆ ಸ್ಮರಣೀಯವಾಗಿರುತ್ತಾರೆ. ಅನಂದ ಸಾಹು ಎರಡನೆಯ ಸಾಲಿಗೆ ಸೇರುತ್ತಾರೆ’ ಎಂದರು.

ಇದೇ ವೇಳೆ ಆನಂದ ಸಾಹು ಅವರ ಪುತ್ರ ರವಿಚಂದ್ರ ಸಾಹು ತಮ್ಮ ತಂದೆಯ ಸ್ಮರಣಾರ್ಥವಾಗಿ ಗ್ರಾಮದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಗ್ರಾಮದ ಕೆಲ ನಿರ್ಗತಿಕರಿಗೆ ವಸ್ತ್ರದಾನ ಮಾಡಿದರು.

ಜಗದೀಶ ನಂಬಾ ಸ್ವಾಗತಿಸಿದರು. ಶಂಕರ ಬಡಿಗೇರ ನಿರೂಪಿಸಿದರು, ಮಲ್ಲಿಕಾರ್ಜುನ ವಂದಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶರಣಮ್ಮ ಸಾಹು, ಮಾಜಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಹಣಮಂತಿ ಸಾಹು ಮಾಜಿ. ತಿಪ್ಪಣ್ಣ ಸಾಹು. ಮಾನಪ್ಪ ಸಾಹು, ಮಂಜುನಾಥ ಹುದ್ದಾರ, ಸೇರಿದಂತೆ ಗ್ರಾಮದ ಯುವಕರು ಸಮಾಜದ ಮುಖಂಡರು ಇದ್ದರು.
 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !