ಸೋಮವಾರ, ನವೆಂಬರ್ 29, 2021
20 °C

ಯಾದಗಿರಿ: ಮತಾಂತರ ಯತ್ನ ಪ್ರಕರಣ; ಕೌಂಟರ್‌ ಕೇಸ್‌ ನಿರಾಕರಣೆ–ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತಾಲ್ಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಮತಾಂತರ ಯತ್ನ ಆರೋಪದ ಮೇಲೆ ಬಂಧಿತರಾಗಿದ್ದವರು ಜಾಮೀನಿನ ಮೇಲೆ ಬುಧವಾರ ಬಿಡುಗಡೆಯಾಗಿದ್ದಾರೆ.

ಕ್ರೈಸ್ತ ಪಾದ್ರಿ ಜೇಮ್ಸ್ ಡೇವಿಡ್ ದಾಸ್ ಮಾಧ್ವಾರ, ಶಾಂತರಾಜ ಜೇಮ್ಸ್ ದಾಸ್, ನೀಲಮ್ಮ ಜೇಮ್ಸ್‌ದಾಸ್, ಮಾಳಮ್ಮ ರಾಘವೇಂದ್ರ ಜಾಮೀನಿ ಮೇಲೆ ಹೊರಗೆ ಬಂದಿದ್ದಾರೆ.

ಕೌಂಟರ್‌ ಕೇಸ್‌ ನಿರಾಕರಣೆ: ‘ಮತಾಂತರ ಯತ್ನ ವಿಷಯಕ್ಕೆ ಸಂಬಂಧಿಸಿದಂತೆ ಕೌಂಟರ್‌ ಕೇಸ್‌ ಮಾಡಲು ಹೋದಾಗ ಪೊಲೀಸರು ನಮ್ಮ ಕೇಸ್‌ ತೆಗೆದುಕೊಳ್ಳದೇ ವಾಪಸ್‌ ಕಳಿಸಿದ್ದಾರೆ’ ಎಂದು ಕರ್ನಾಟಕ ಕ್ರೈಸ್ತ ಜಿಲ್ಲಾ ಅಧ್ಯಕ್ಷ ಗೀರಿಶ್‌ ಕುಮಾರ ಆರೋಪಿಸಿದ್ದಾರೆ.

‘ವಿವಿಧ ಹಿಂದು ಪರ ಸಂಘಟನೆಗಳು ಠಾಣೆ ಮುಂದು ಬಂದು ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ್ದಾರೆ.

ಸೈದಾಪುರ ಪಿಎಸ್‌ಐ ಭೀಮರಾಯ ಬಂಕ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ‘ಕೌಂಟರ್‌ ಕೇಸ್‌ ಕೊಡಲು ಬಂದರೆ ಖಂಡಿತವಾಗಿ ತೆಗೆದುಕೊಳ್ಳುತ್ತೇವೆ. ಸುಳ್ಳು ಆರೋಪ ಮಾಡಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಪ್ರತಿಕ್ರಿಯಿಸಿ, ‘ನಮ್ಮ ಬಳಿ ಕೆಲವರು ಬಂದು ಘಟನೆ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ದೂರು ದಾಖಲು ಮಾಡಿಲ್ಲ’ ಎಂದು ತಿಳಿಸಿದ್ದಾರೆ.

(ಸೆ.26) ರಂದು ನೀಲಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಜನರನ್ನು ಬಲವಂತದ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥ ನರಸಪ್ಪ ಭೀಮರಾಯ ಜೇಗರ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು