ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಜಿಲ್ಲೆಯ ಎಲ್ಲಾ 42 ವರದಿ ನೆಗೆಟಿವ್

‌ಕೊಂಗಂಡಿಯ 4 ವರ್ಷದ ಮಗುವಿನ ವರದಿ ಕೂಡ ನಕಾರಾತ್ಮಕ
Last Updated 9 ಏಪ್ರಿಲ್ 2020, 15:55 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇಲ್ಲಿಯವರೆಗೆ ಕಳುಹಿಸಿದ್ದ ಒಟ್ಟು 42 ಮಾದರಿಗಳ ಪೈಕಿ ಬಾಕಿಯಿದ್ದ 21 ಮಾದರಿಗಳ ವರದಿ ಕೂಡ ಗುರುವಾರ ನೆಗೆಟಿವ್ ಬಂದಿವೆ. ಗುರುವಾರ ಮತ್ತೆ ಕೊರೊನಾ ಪರೀಕ್ಷೆಗೆಂದು ಹೊಸದಾಗಿ 9 ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ತಿಳಿಸಿದ್ದಾರೆ.

ಅರಕೇರಾ (ಕೆ) ಹಾಸ್ಟೆಲ್‍ನ ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್‍ನಲ್ಲಿ 20 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಬೆಂಗಳೂರು ನಗರದಿಂದ ಆಗಮಿಸಿದ ಈ 20 ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ನೆಗೆಟಿವ್ ಫಲಿತಾಂಶ ಬಂದಿವೆ. ಇನ್ನು ಶಹಾಪುರ ತಾಲ್ಲೂಕಿನ ಕೊಂಗಂಡಿ ಗ್ರಾಮದ 4 ವರ್ಷದ ಮಗುವಿನ ಗಂಟಲಿನ ಮಾದರಿಯನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಫಲಿತಾಂಶವೂ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT