ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ವಿದ್ಯಾರ್ಥಿಗಳ ಕೊರೊನಾ ಪ್ರದರ್ಶನ

Last Updated 16 ಆಗಸ್ಟ್ 2022, 3:55 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಧ್ವಜಾರೋಹಣ ಅಂಗವಾಗಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ನಗರದ ಆರ್‌ವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕೊರೊನಾ ಸಂದರ್ಭದ ಪರಿಸ್ಥಿತಿಯನ್ನು ವಿದ್ಯಾರ್ಥಿಗಳು ಅಭಿನಯಿಸಿ ತೋರಿಸಿದರು. ಮಾಸ್ಕ್‌ ಧರಿಸುವ ಬಗ್ಗೆ, ಲಾಕ್‌ಡೌನ್‌ ಸೇರಿದಂತೆ ಕೋವಿಡ್‌ ಪರಿಸ್ಥಿತಿಯನ್ನು ಅಭಿನಯಿಸಿದರು.

ಕೊರೊಬಾ ಸಮಯದಲ್ಲಿ ಅಮೂಲ್ಯ ‌ಜೀವನಗಳು, ಆತ್ಮೀಯರು, ಬಂಧು ಬಳಗದ ಬಹಳಷ್ಟು ಜನ ಜೀವ ಕಳೆದುಕೊಂಡರು. ಇತಿಹಾಸದಲ್ಲಿ ಇರುವ ಒಂದು ಕರಾಳ ಅಧ್ಯಯವಾಗಿ ಸೇರ್ಪಡೆಗೊಂಡಿತ್ತು. ಕೊರೊನಾ ಹಲವು ಪಾಠಗಳು ಕಲಿಸಿತು ಎಂದು ಅಭಿನಯಿಸಿ ತೋರಿಸಿದರು.
ಅಭಿನಯ ಕಂಡು ಸಚಿವ ಪ್ರಭು‌ ಚವಾಣ್‌ ₹5 ಸಾವಿರ ನಗದು ಹಣ ವಿದ್ಯಾರ್ಥಿಗಳಿಗೆ ನೀಡಿದರು.

ಇದರ ಜೊತೆಗೆ ವಿವಿಧ ಶಾಲಾ–ವಿದ್ಯಾರ್ಥಿಗಳು ದಾಂಡೀಯಾ, ದೇಶ ಭಕ್ತಿ ಬಿಂಬಿಸುವ ಹಾಡುಗಳನ್ನು ಪ‍್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT