ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕುಂಬಾರರ ಬದುಕು ಕಸಿದ ಕೊರೊನಾ

ಕುಂಬಾರರ ಕುಟುಂಬಗಳ ಬದುಕು ದುಸ್ತರ, ಖರೀದಿದಾರರು ಇಲ್ಲದೆ ಕಂಗಾಲು
Last Updated 9 ಮೇ 2020, 19:45 IST
ಅಕ್ಷರ ಗಾತ್ರ

ಯಾದಗಿರಿ: ಕುಂಬಾರಿಕೆ ವೃತ್ತಿ ನಂಬಿ ಜಿಲ್ಲೆಯಲ್ಲಿರುವ 10 ರಿಂದ 15,000 ಜನಸಂಖ್ಯೆ ಇದ್ದು, ಕಳೆದೆರಡು ತಿಂಗಳಿಂದ ವ್ಯಾಪಾರವೇ ಇಲ್ಲದೆ ತಲೆಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

ಗಡಿಕೆ ತಯಾರಿಕೆಗಾಗಿ ಸಾಲ-ಸೋಲ ಮಾಡಿ ಜೇಡಿ ಮಣ್ಣು, ಗಡಿಗೆ ಸುಡಲು ಕಟ್ಟಿಗೆ ಹೀಗೆ ಸಾವಿರಾರು ಖರ್ಚು ಮಾಡಿದ್ದಾರೆ. ಆದರೆ, ಇದೆಲ್ಲವೂಲಾಕ್‍ಡೌನ್‍ನಿಂದ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.

ಕುಂಬಾರರ ಮೂಲ ವೃತ್ತಿ ಕುಂಬಾರಿಕೆಯಾಗಿದೆ. ಯುಗಾದಿ ಹಬ್ಬಕ್ಕೆ ತಯಾರಿಸಿದ ಬೇವಿನ ಗಡಿಗೆ ಕೂಡ ಮಾರಾಟವಾಗದೆ ಹಾಗೆ ಉಳಿದಿವೆ. ಬೇಸಿಗೆ ಕಾಲದಲ್ಲಿಒಲೆಗಳು, ಮಡಿಕೆಗಳು, ಊಜಿಗಳಿಗೆ, ತಂಪಾದ ಗಡಿಗೆಗಳಿಗೆ ಭಾರಿ ಬೇಡಿಕೆ ಇರುತ್ತದೆ ಎಂದು ಕುಂಬಾರರು ಭಾವಿಸಿಕೊಂಡಿದ್ದರು. ಆದರೆ, ಮಾರಾಟವಾದೆ ಮನೆಗಳಲ್ಲಿ ಸಂಗ್ರಹಿಸಿ ಇಡುವ ಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆಯಲ್ಲಿ ಬಂದ ಆದಾಯದಿಂದಲೇ ಇಡೀ ವರ್ಷ ಊಟಕ್ಕೆ ದಾರಿ ಮಾಡಿಕೊಳ್ಳುತ್ತಿದ್ದರು. ಕುಂಬಾರರು ಕುಂಬಾರಿಕೆ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಾರೆ.

ಯಾದಗಿರಿ, ಶಹಾಪುರ ಹೀಗೆವಿವಿಧನಗರ ಪಟ್ಟಣಗಳಿಂದ ಗಡಿಗೆಗಳನ್ನು ಖರೀದಿಸುವವರು ಬಾರದೆ ಇರುವುದರಿಂದ ಮಡಿಕೆಗಳಿಗೆಬೇಡಿಕೆ ಇಲ್ಲದಂತಾಗಿದೆ. ಕುಂಬಾರಿಕೆಯಿಂದ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವಾಗ ಕೊರೊನಾ ವೈರಸ್ ಎಂಬ ಪೆಡಂಭೂತನಿಂದ ಬಡ ಕುಂಬಾರರ ಬದುಕು ಕೂಡ ಕಸಿದಿದೆ ಎಂದು ಕುಂಬಾರ ಸಮುದಾಯದವರು ಹೇಳುತ್ತಾರೆ.

ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ, ರಂಗಪೇಟೆ, ರುಕ್ಮಾಪುರ, ಕುಂಬಾರಪೇಟೆ, ಕೆಂಭಾವಿ, ಕಕ್ಕೇರಾ, ಕೋಡೆಕಲ್ಲ, ಗೋಗಿ ರಾಜಕೊಳ್ಳುರ, ಮುದ್ನಾಳ, ಹತ್ತಿಕುಣಿ, ಮಧ್ವಾರ, ವಡಗೇರಾ,ಉಳ್ಳೆಸೂಗುರು, ಮಳ್ಳಳ್ಲಿ, ನಾಯ್ಕಲ್ ಸೇರದಂತೆ ವಿವಿಧ ಗ್ರಾಮದ ಕುಂಬಾರರ ಕುಂಬಾರಿಕೆ ಬದುಕು ಲಾಕ್‌ಡೌನ್ ಕಸಿದಿದೆ.

‘ಒಂದು ಗಡಿಗೆ ₹50ರಿಂದ 100 ರ ತನಕ ದರವಿದೆ. ಆದರೆ, ಮಾರಾಟ ಆಗುತ್ತಿಲ್ಲ. ಹೊಲಗದ್ದೆಗಳು ಇಲ್ಲ. ವೃತ್ತಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದೇವೆ. ನಮ್ಮಂಥವರಿಗೆ ಯಾರ ಸಹಾಯವೂ ದೊರಕಿಲ್ಲ’ ಎನ್ನುತ್ತಾರೆ ಚಂದ್ರಕಾಂತ ಕುಂಬಾರ.

***

ಲಾಕ್‌ಡೌನ್‍ನಿಂದಾಗಿ ಕುಂಬಾರ ವೃತ್ತಿ ಮೇಲೆ ಭಾರೀ ಪರಿಣಾಮ ಬೀರಿದೆ. ಮಾಡಿದ ಗಡಿಗೆಗಳು ಕೊಳ್ಳುವವರು ಇಲ್ಲದ್ದರಿಂದ ಕುಟುಂಬಗಳಿಗೆ ತೊಂದರೆ ಆಗಿದೆ. ದಿನದ ಬದುಕು ಸಾಗಿಸುವುದು ಕಷ್ಟಕರವಾಗಿದೆ

-ಹಣಮಂತ ಕುಂಬಾರ, ನಾಯ್ಕಲ್ ಗ್ರಾಮಸ್ಥ

***

ಬೇಸಿಗೆ ವೇಳೆ ಕುಂಬಾರರು ಮಾಡಿದ ಮಡಿಕೆಗಳಿಂದ ವರ್ಷವಿಡೀ ಕುಂಬಾರರಿಗೆ ಆಧಾರ ಸ್ತಂಭ. ಇದೀಗ ಸೀಸನ್ ಸಮಯದಲ್ಲಿ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಕುಂಬಾರಿಕೆ ವೃತ್ತಿ ಬಂದ್ ಆಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT