ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಶೇ 66 ರಷ್ಟು ಕೊರೊನಾ ವಾರಿಯರ್ಸ್‌ಗೆ ಲಸಿಕೆ

ಎರಡನೇ ಹಂತದ ಲಸಿಕೆಗೆ ಸಿದ್ಧತೆ, ಎರಡು ಹಂತಗಳಲ್ಲಿ ಜಿಲ್ಲೆಗೆ ಬಂದ 6,000 ಕೋವಿಶಿಲ್ಡ್‌ ಲಸಿಕೆ
Last Updated 4 ಫೆಬ್ರುವರಿ 2021, 5:09 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌ ನಿಯಂತ್ರಣಕ್ಕೆ ಕೋವಿಶಿಲ್ಡ್‌ ಲಸಿಕೆ ನೀಡಿಕೆ ಜ.16ರಿಂದ ಆರಂಭವಾಗಿದ್ದು, ಜಿಲ್ಲೆಯಲ್ಲಿ ಶೇ 66.65 ರಷ್ಟು ಗುರಿ ಸಾಧಿಸಲಾಗಿದೆ.

ಮೊದಲಲಸಿಕೆಜಿಲ್ಲಾಸ್ಪತ್ರೆ ಡಿ ಗ್ರೂಪ್‌ ನೌಕರರಿಗೆ ನೀಡಲಾಯಿತು. ನಂತರದ ದಿನಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮೊದಲ ಹಂತದ ಲಸಿಕೆ ಪಡೆದಿದ್ದು, ಎರಡನೇ ಹಂತ ಎರಡು ವಾರಗಳಲ್ಲಿ ನಡೆಯಲಿದೆ.

ಎಷ್ಟೆಷ್ಟು ಕೋವಿಶಿಲ್ಡ್‌ ಬಳಕೆ:

ಜನವರಿ 16ರಂದು 5 ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ನಂತರ 18ರಂದು 8, 20ರಂದು 7, 22ರಂದು 9, 25ರಂದು 10, 27ರಂದು 12, 29ರಂದು 1 ಕೇಂದ್ರ ಸೇರಿದಂತೆ ಒಟ್ಟಾರೆ 52 ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆದಿತ್ತು.

ಜನವರಿ 30ರಿಂದ ಫೆ.3ರ ತನಕ ಪೋಲಿಯೊ ಲಸಿಕೆ ಹಾಕಬೇಕಿದ್ದರಿಂದ ಕೋವಿಶಿಲ್ಡ್‌ ಲಸಿಕೆ ಅಭಿಯಾನ ಸ್ಥಗಿತಗೊಳಿಸಲಾಗಿತ್ತು.

4,597 ಜನರಿಗೆ ಲಸಿಕೆ ನೀಡುವ ಗುರಿ:

ಜಿಲ್ಲೆಯಲ್ಲಿ ಆರೋಗ್ಯವಂತ, ಲಸಿಕೆ ಪಡೆಯಲು ಅರ್ಹರಾದವರನ್ನು ಪಟ್ಟಿ ಮಾಡಲಾಗಿತ್ತು. ಆದರಂತೆ 4,597 ವಾರಿಯರ್ಸ್‌ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ, ಕಾರಣಾಂತರದಿಂದ ಗುರಿ ಮುಟ್ಟಲು ಸಾಧ್ಯವಾಗಿಲ್ಲ.

ಜನವರಿ 16ರಂದು 445, 18ರಂದು 519, 20ರಂದು 526, 22ರಂದು 883, 25ರಂದು 961, 27ರಂದು 1,293, 29ರಂದು 20 ವಾರಿಯರ್ಸ್‌ಗಳಿಗೆ ಲಸಿಕೆ ನೀಡಬೇಕಾಗಿತ್ತು. ಆದರೆ, ಜ.29ರ ಅಂಕಿ ಅಂಶದಂತೆ ಶೇ 65ರಷ್ಟು ಮಾತ್ರ ಲಸಿಕೆ ಪಡೆದಿದ್ದಾರೆ.

ಲಸಿಕೆ ಪಡೆಯದೆ ಬಾಕಿ ಉಳಿದವರು:

ಜ.16 ರಂದು 198, ಜ.18 ರಂದು 177, ಜ.20ರಂದು 170, ಜ.22 ರಂದು 243, ಜ.25 ರಂದು 323, ಜ.27 ರಂದು 555, ಜ.29 ರಂದು 4 ಜನ ಲಸಿಕೆ ಪಡೆಯದೆ ದೂರ ಉಳಿದಿದ್ದಾರೆ.

3,064 ಲಸಿಕೆ ಪಡೆದವರು:

ಜ.16 ರಂದು 247, ಜ.18 ರಂದು 342, ಜ.20 ರಂದು 356, ಜ.22 ರಂದು 590, ಜ.25 ರಂದು 638, ಜ.27 ರಂದು 738, ಜ.29 ರಂದು 16 ಸೇರಿದಂತೆ3,064 ವಾರಿಯರ್ಸ್‌ ಚಿಕಿತ್ಸೆ ಪಡೆದಿದ್ದಾರೆ.

ಯಾರಿಗಿಲ್ಲ ಲಸಿಕೆ?:

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ಪಡೆಯಲು ಅವಕಾಶವಿದೆ. 50 ವರ್ಷ ಮೇಲ್ಪಟ್ಟ ಮತ್ತು ಅನಾರೋಗ್ಯ, ಮಧುಮೇಹ, ರಕ್ತದೋತ್ತಡ ಇದ್ದವರಿಗೆ ಲಸಿಕೆ ಪಡೆಯುವಂತಿಲ್ಲ. ಹೀಗಾಗಿ ಶೇಕಡ 100ರಷ್ಟು ಗುರಿ ಸಾಧಿಸಲು ಆಗಿಲ್ಲ.

ಲಸಿಕೆ ಪಡೆದವರು (ದಿನಾಂಕವಾರು)
ದಿನಾಂಕ;ಶೇಕಡವಾರು

ಜ.16;55.50
ಜ.18;65.89
ಜ.20;67.68
ಜ.22;70.82
ಜ.25;66.38
ಜ.27;57.07
ಜ.29;80
ಒಟ್ಟು;66.65

ಅಂಗನವಾಡಿ ಕಾರ್ಯಕರ್ತೆಯರ ಹಿಂದೇಟು

ಕೋವಿಡ್‌ ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರ ಮೊದಲನೇ ಆದ್ಯತೆ ನೀಡಿ ಕೋವಿಶಿಲ್ಡ್‌ ಲಸಿಕೆ ನೀಡಲಾಗಿದೆ. ಆದರೆ, ಅಂಗನವಾಡಿ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ 1,300ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿದ್ದಾರೆ. ಇದರಲ್ಲಿ ಮೇಲ್ವಿಚಾರಕರು ಮಾತ್ರ ಪಡೆದಿದ್ದಾರೆ. ಕಾರ್ಯಕರ್ತೆ, ಸಹಾಯಕಿರು ಮುಂದೆ ಬಾರದಿರುವುದು ಶೇಕಡ ನೂರರಷ್ಟು ಗುರು ತಲುಪಲು ಸಾಧ್ಯವಾಗದಕ್ಕೆ ಇದು ಕಾರಣ ಎನ್ನಲಾಗಿದೆ. ಇನ್ನುಳಿದಂತೆ ಆರೋಗ್ಯ ಎಲ್ಲ ಸ್ತರದ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ವಿವಿಧ ಕಾಯಿಲೆ, ಗರ್ಭಿಣಿ, ಬಾಣಂತಿಯರು ಚಿಕಿತ್ಸೆ ಪಡೆಯಲು ಅವಕಾಶವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT