ರೋಗಮುಕ್ತ ಬದುಕು ಅಗತ್ಯ: ಸ್ವಾಮೀಜಿ

7

ರೋಗಮುಕ್ತ ಬದುಕು ಅಗತ್ಯ: ಸ್ವಾಮೀಜಿ

Published:
Updated:
Deccan Herald

ಯಾದಗಿರಿ:‘ಉತ್ತಮ ಜೀವನ ಕ್ರಮದಿಂದ ರೋಗಮುಕ್ತವಾಗಿರಲು ಸಾಧ್ಯ’ ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ದಸಂಸ್ಥಾನ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು.

ಇಲ್ಲಿನ ಶರಣಬಸವ ಆಸ್ಪತ್ರೆಯಲ್ಲಿ ಶುಕ್ರವಾರ ಡಯಾಲಿಸಿಸ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕ ಜೀವನ ಶೈಲಿ, ಕೆಟ್ಟ ಆಹಾರ ಪದ್ಧತಿಯಿಂದ ಶರೀರ ರೋಗಗಳ ಆವಾಸ ಸ್ಥಾನವಾಗುತ್ತಿದೆ. ಶ್ರಮ, ಗುಣಮಟ್ಟದ ಆಹಾರ, ಉತ್ತಮ ಸಂಸ್ಕಾರಯುತ ಬದುಕು ರೂಢಿಸಿಕೊಳ್ಳುವುದರಿಂದ ರೋಗಮುಕ್ತ ಬದುಕು ನಮ್ಮದಾಗುತ್ತದೆ’ ಎಂದರು.

‘ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹಿರಿಯರು ಹೇಳುತ್ತಾರೆ. ಇಂದು ಚಟಗಳಿಂದಾಗಿ ಜನರು ಊಟ ಮರೆತಿದ್ದಾರೆ.
ಸಮಯಕ್ಕೆ ಊಟ, ನಿದ್ರೆ, ಶ್ರಮ ಇಲ್ಲದೇ ಅನಾರೋಗ್ಯಕ್ಕೆ ಈಡಾಗಿ ಅಲ್ಪಾಯುಷಿಗಳಾಗುತ್ತಿದ್ದಾರೆ’ ಎಂದರು.

‘ವೈದ್ಯರು ಸಾಕ್ಷಾತ್ ದೇವರು ಇದ್ದಂತೆ. ರೋಗಿಗಳೊಂದಿಗೆ ಆತ್ಮೀಯವಾಗಿ ಮಾತನಾಡುವ ಮೂಲಕ ಅವರ ವಿಶ್ವಾಸ ಗಳಿಸಿ ಚಿಕಿತ್ಸೆ ನೀಡಬೇಕು. ರೋಗ ನಿಯಂತ್ರಣ ಕುರಿತು ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು’ ಎಂದು ಸಲಹೆ ನೀಡಿದರು.

ಡಾ.ಬಸವರಾಜ ಎಸ್. ಕೊಲ್ಲೂರು ಮಾತನಾಡಿ,‘ನಗರದಲ್ಲಿ ಡಯಾಲಿಸಿಸ್‌ ಘಟಕಗಳ ಅಗತ್ಯ ಇದೆ. ನೂರಾರು ರೋಗಿಗಳು ಈ ಚಿಕಿತ್ಸೆಗಾಗಿಯೇ ದೂರದ ನಗರಗಳಿಗೆ ಹೋಗುತ್ತಾರೆ. ಇನ್ನು ಮುಂದೆ ಈ ಸೌಲಭ್ಯ ಸ್ಥಳೀಯವಾಗಿಯೇ ಲಭ್ಯವಾಗಲಿದೆ’ ಎಂದು ಹೇಳಿದರು.

ಡಾ.ವೀರಭದ್ರಪ್ಪ ಶಿವರಾಯ ಎಲ್ಹೇರಿ, ಡಾ.ಸುಭಾಶ ಬಿ. ಪಾಟೀಲ್, ಡಾ.ಸಿದ್ದಪ್ಪ ಎಸ್. ಮಾಗ್ರೋಳ, ಡಾ.ಶರಣಬಸಪ್ಪ ಎಲ್ಹೇರಿ, ಡಾ.ಅನುಷಾ ಎಸ್. ದೇಸಾಯಿ, ಡಾ. ಬಿ.ಎಸ್ಪವಿತ್ರಾ, ಡಾ.ಮಹೇಶ ರೆಡ್ಡಿ ಇದ್ದರು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !