ಯಾದಗಿರಿ: ‘ಗಿರಿಜನ ಸಮುದಾಯಗಳ ಸಾಂಸ್ಕೃತಿಕ ವೈಭವ, ಪರಂಪರೆ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರಲು ದೆಹಲಿಯಲ್ಲಿ ಮೇ 24ರಂದು ಜನಜಾತಿ ಸಾಂಸ್ಕೃತಿಕ ಸಮಾಗಮ–2026 ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಗಿರಿಜನ ಸುರಕ್ಷಾ ವೇದಿಕೆ ರಾಜ್ಯ ಸಂಯೋಜಕ ಗಂಗಾಧರ ನಾಯಕ್ ತಿಂಥಿಣಿ ಹೇಳಿದರು.

‘ವನವಾಸಿ, ಗ್ರಾಮವಾಸಿ, ನಗರವಾಸಿ — ನಾವೆಲ್ಲರೂ ಭಾರತವಾಸಿಗಳು; ನಮ್ಮೆಲ್ಲರ ರಕ್ತ ಒಂದೇ’ ಘೋಷವಾಕ್ಯದಡಿ ಈ ಸಮಾವೇಶ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವರು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜನನಾಯಕ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿ ವರ್ಷದ ಅಂಗವಾಗಿ ಆಯೋಜನೆ ಆಗುತ್ತಿರುವ ಈ ಮಹಾಸಂಗಮದಲ್ಲಿ ದೇಶದ ವಿವಿಧ ರಾಜ್ಯಗಳ 500ಕ್ಕೂ ಹೆಚ್ಚು ಜನಜಾತಿ ಸಮುದಾಯಗಳಿಂದ 1.50 ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ’ ಎಂದರು.

‘ಜನಜಾತಿ ಸಮುದಾಯಗಳ ವೈವಿಧ್ಯಮಯ ವೇಷಭೂಷಣ, ಕಲಾ ಪರಂಪರೆ, ಜನಪದ ಸಂಸ್ಕೃತಿ ಹಾಗೂ ಜೀವನ ಶೈಲಿಯ ವೈಭವವು ಸಮಾವೇಶದಲ್ಲಿ ಅನಾವರಣಗೊಳ್ಳಲಿದೆ. ಜೊತೆಗೆ ಇದೊಂದು ಅತಿದೊಡ್ಡ ಗಿರಿಜನ ಸಾಂಸ್ಕೃತಿಕ ಸಮಾವೇಶವಾಗಲಿದೆ. ಯಾದಗಿರಿ ಜಿಲ್ಲೆಯಿಂದ 130ಕ್ಕೂ ಹೆಚ್ಚು ಗಿರಿಜನ ಸಮುದಾಯದ ಪ್ರತಿನಿಧಿಗಳು ಭಾಗವಹಿಸುವರು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಂಕಪ್ಪ ಮಾಕಸಿ ಹೇಮನೂರು, ರಾಜಾ ಪಿಡ್ಡ ನಾಯಕ್, ಕಾಶಪ್ಪ ದೊರೆ ಅಬ್ಬೆತುಮಕೂರು, ಭೀಮಾಶಂಕರ ಮೇಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.