ಶುಕ್ರವಾರ, ಅಕ್ಟೋಬರ್ 30, 2020
24 °C

ಅವಧಿ ಮುಗಿದ ₹16 ಲಕ್ಷ ಮೌಲ್ಯದ ಮದ್ಯ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಹೊರ ವಲಯದ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಮದ್ಯ ಸಂಗ್ರಹ ಘಟಕ ಆವರಣದಲ್ಲಿ ಅವಧಿ ಮುಗಿದ ₹16 ಲಕ್ಷ ಮೌಲ್ಯದ ಮದ್ಯವನ್ನು ನಾಶಪಡಿಸಲಾಯಿತು.

ನಾಕ್‍ಔಟ್ ಕಂಪನಿಯ ಪೋಸ್ಟರ್ ಗೋಲ್ಡ್, ಲಾಗರ್ ಹಾಗೂ ನಾಕ್‍ಔಟ್ ಸ್ಟ್ರಾಂಗ್‍ಗೆ ಸೇರಿದ ಒಟ್ಟು ₹1,028 ಬಾಕ್ಸ್‌ ಬಿಯರ್‌ ಅನ್ನು ನಾಶಪಡಿಸಲಾಯಿತು.

ಅಬಕಾರಿ ಇಲಾಖೆಯ ಉಪನೀರಿಕ್ಷಕ ಶ್ರೀರಾಮ್ ರಾರೋಡ್, ಮಳಿಗೆ ಅಬಕಾರಿ ನೀರಿಕ್ಷಕ ಪ್ರಕಾಶ ಮಾಕೊಂಡ ನೇತೃತ್ವದಲ್ಲಿ ದೊಡ್ಡ ಗುಂಡಿ ತೋಡಿ ಅದರಲ್ಲಿ ಮದ್ಯವನ್ನು ಸುರಿದು ನಂತರ ಮಣ್ಣು ಮುಚ್ಚಲಾಯಿತು.

ಶ್ರೀರಾಮ್ ರಾಠೋಡ್ ಮಾತನಾಡಿ, ಅವಧಿ ಮುಗಿದ ಮದ್ಯವನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನಾಶಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮಳಿಗೆ ವ್ಯವಸ್ಥಾಪಕ ವಿ.ಡಿ.ವೆಂಕಟೇಶ, ಸಹಾಯಕ ವ್ಯವಸ್ಥಾಪಕ ಅಡಿವೆಪ್ಪ ಭಜಂತ್ರಿ, ಎಂ.ಎಸ್.ಪಾಟೀಲ, ಶಿವರಾಜಕುಮಾರ ಮುಂಡರಗಿಮಠ, ದೇವಿಂದ್ರ ಗೋನಾಳ, ಹತ್ತಿಕುಣಿ ನಾಡಕಚೇರಿ ಉಪ ತಹಶೀಲ್ದಾರ ಬಸವರಾಜ, ಗ್ರಾಮ ಲೆಕ್ಕಿಗ ಬಸಪ್ಪ ವಾಲಿ, ಕಂಪನಿಯ ಪ್ರತಿನಿಧಿ ಶಿವುಕುಮಾರ ಹೇರೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು