ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದನೂರ; ದೇವಿ ಪುರಾಣ ಆರಂಭ

Last Updated 29 ಸೆಪ್ಟೆಂಬರ್ 2022, 4:52 IST
ಅಕ್ಷರ ಗಾತ್ರ

ಕೆಂಭಾವಿ: ಮುದನೂರಿನ ಕಂಠಿ ಶ್ರೀಕೋರಿಸಿದ್ದೇಶ್ವರ ಶಾಖಾಮಠ ರಾಜ್ಯದ ಎಲ್ಲೆಡೆ ಉತ್ತಮ ಹೆಸರು ಮಾಡಿದೆ. ಪೂಜ್ಯರ ದಿವ್ಯಶಕ್ತಿಯಿಂದ ಮಠದ ಹೆಸರು ಎಲ್ಲೆಡೆ ಪಸರಿಸಿದೆ’ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಹೇಳಿದರು.

ಸಮೀಪ ಮುದನೂರ ಗ್ರಾಮದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಹಮ್ಮಿಕೊಂಡ ಸಿದ್ಧ ಚೆನ್ನ ಮಲ್ಲಿಕಾರ್ಜುನ ಶಿವಾಚಾರ್ಯರ 21ನೇ ವರ್ಷದ ಅನುಷ್ಠಾನ ಹಾಗೂ ಶ್ರೀದೇವಿ ಪುರಾಣ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ ಮಾತನಾಡಿದರು.

ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಶ್ರೀದೇವಿ ಪುರಾಣದ ಪೀಠಿಕೆ, ಎರಡು ಅಧ್ಯಾಯ ಹೇಳಿದರು.

ಶಾಂತರೆಡ್ಡಿ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸ್‍ಐ ಹಣಮಂತ ಬಂಕಲಗಿ, ಪ್ರಭುಗೌಡ ಹರನಾಳ, ಚೆನ್ನಯ್ಯಸ್ವಾಮಿ ಹಿರೇಮಠ, ಚಂದ್ರಶೇಖರ ಪಾಟೀಲ, ರಾಮನಗೌಡ ರಸ್ತಾಪುರ, ವಿರೇಶ ದೇಸಾಯಿ, ಭೀಮರೆಡ್ಡಿ ಬೆಕಿನಾಳ, ಪರಮಣ್ಣಗೌಡ ಕರಡಕಲ್, ದೇವು ಕರಡಕಲ್, ದೇವು ಮುದನೂರ, ಪ್ರಕಾಶ ಅಂಗಡಿ ಕನ್ನೆಳ್ಳಿ ಇದ್ದರು. ಬಸವರಾಜ ಬಂಟನೂರ, ಯಮನೇಶ ಯಾಳಗಿ ಸಂಗೀತ ಸೇವೆ ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT