ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟಲಿಂಗ ಪೂಜೆಯಿಂದ ಆತ್ಮಶುದ್ಧಿ: ಖಾಸಾಮಠ ಶ್ರೀ

Last Updated 18 ಆಗಸ್ಟ್ 2022, 5:53 IST
ಅಕ್ಷರ ಗಾತ್ರ

ಗುರುಮಠಕಲ್: ‘ಶ್ರಾವಣ ಮಾಸದಲ್ಲಿ ಆಯೋಜಿಸುವ ಪ್ರವಚನ, ಭಜನೆ, ಕೀರ್ತನೆ ಸೇರಿದಂತೆ ಆಧ್ಯಾತ್ಮ ಸಾಧನೆಯು ಮಾನಸಿಕ ನೆಮ್ಮದಿ ನೀಡುತ್ತವೆ. ಆತ್ಮಶುದ್ಧಿಗಾಗಿ ಇಷ್ಟಲಿಂಗ ಪೂಜೆ ಸಹಕಾರಿಯಾಗಿದ್ದು, ಅಂಗವನ್ನೇ ಲಿಂಗವಾಗಿಸುವ ಮೂಲಕ ನಮ್ಮನ್ನು ಪವಿತ್ರಗೊಳಿಸುತ್ತದೆ’ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಾಜಿನಗರ ಬಡಾವಣೆಯ ಭಕ್ತೆ ರಾಜಶ್ರೀ ರಘುನಾಥರೆಡ್ಡಿ ನಜರಾಪುರ ಅವರ ಮನೆಯಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗಪೂಜೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಜನತೆಯ ನಿರಂತರ ಯಾಂತ್ರಿಕ ಜೀವನದಿಂದ ಮಾನಸಿಕ ಒತ್ತಡದಲ್ಲಿ ಸಿಲುಕುವುದು ಸಾದಾರಣ. ಆದರೆ, ಇಷ್ಟಲಿಂಗಪೂಜೆ ಮಾಡುವುದರಿಂದ ಒತ್ತಡ ನಿರ್ವಹಣೆ ಸಾಧ್ಯವಾಗುತ್ತದೆ ಎಂದರು.

ಸಹಜ ಶಿವಯೋಗ ಜೀವನವನ್ನು ಸರಳಗೊಳಿಸುವ ಜತೆ ನೆಮ್ಮದಿ ನೀಡುತ್ತದೆ. ಆದ್ದರಿಂದ ಖಾಸಾಮಠದ ವತಿಯಿಂದ ಶ್ರಾವಣಮಾಸದಲ್ಲಿ ಶಿವಯೋಗವನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರೆಸುವ ಮೂಲಕ ಲಾಭಪಡೆಯುವಂತೆ ಅವರು ಸಲಹೆ ನೀಡಿದರು.

ನಿರಂಜನ ಸ್ವಾಮಿಜಿ, ನರಸರೆಡ್ಡಿ ಪಾಟೀಲ ಗಡ್ಡೆಸೂಗೂರ, ವೀರಣ್ಣ ಬೇಲಿ, ರಘುನಾಥರೆಡ್ಡಿ ನಜಾರಪೂರ, ಮಾಣೀಕ, ಮಹೇಂದ್ರರೆಡ್ಡಿ, ಬಸವರಾಜ ಅಡಕಿ, ಉಮಾರೆಡ್ಡಿ, ಕೃಷ್ಣಾ, ಶಾರದಾರೆಡ್ಡಿ, ಪದ್ಮವತಿ ಪಾಟೀಲ, ರಾಧಿಕಾ, ಜ್ಯೋತಿ ಎಲ್ಹೇರಿ, ಶರಣು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT