ಜಿಲ್ಲೆಯಾದ್ಯಂತ ಉತ್ತಮ ಮಳೆ

7

ಜಿಲ್ಲೆಯಾದ್ಯಂತ ಉತ್ತಮ ಮಳೆ

Published:
Updated:

ಯಾದಗಿರಿ: ಜಿಲ್ಲೆಯ ಐದು ತಾಲ್ಲೂಕುಗಳಲ್ಲೂ ಬುಧವಾರ ರಾತ್ರಿಯಿಂದ ಉತ್ತಮ ಮಳೆಯಾಗಿದೆ. ಮಳೆ ಕೊರತೆ ಅನುಭವಿಸಿದ್ದ ರೈತರು ಉತ್ತಮ ಮಳೆಯಿಂದಾಗಿ ಖುಷಿಗೊಂಡಿದ್ದಾರೆ. ಮಳೆ ಕೈಕೊಟ್ಟಿದ್ದರಿಂದ ಯಾದಗಿರಿ ತಾಲ್ಲೂಕಿನಲ್ಲಿ ಪ್ರಮುಖ ಹೆಸರು ಬೆಳೆದ ರೈತರು ಆತಂಕ ಪಟ್ಟಿದ್ದರು. ಹದ ಮಳೆಯಿಂದಾಗಿ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಮಳೆ ವರದಿ: ಯಾದಗಿರಿಯಲ್ಲಿ 24 ಎಂಎಂ, ಗುರುಮಠಕಲ್‌ನಲ್ಲಿ 26.2 ಎಂಎಂ, ಸೈದಾಪುರದಲ್ಲಿ 22.4 ಎಂಎಂ, ಬಳಿಚಕ್ರದಲ್ಲಿ 16.4 ಎಂಎಂ, ಹತ್ತಿಕುಣಿಯಲ್ಲಿ25.2 ಎಂಎಂ, ಅಜಲಾಫುರದಲ್ಲಿ 12.2 ಎಂಎಂ ಮಳೆಯಾಗಿರುವುದಾಗಿ ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ತಿಳಿಸಿದ್ದಾರೆ.

ಸುರಪುರ ತಾಲ್ಲೂಕು ಮಳೆ ಪ್ರಮಾಣ ವರದಿ: ಸುರಪುರ–6.8 ಎಂಎಂ, ಕಕ್ಕೇರಾ–4.0 ಎಂಎಂ, ಕೊಡೇಕಲ್‌–5.0 ಎಂಎಂ, ನಾರಾಯಣಪುರ–3.0 ಎಂಎಂ, ಹುಣಸಗಿ–1.0 ಎಂಎಂ., ಕೆಂಭಾವಿ–4.4 ಎಂಎಂ ಮಳೆಯಾಗಿದೆ.

ಶಹಾಪುರ ಮಳೆ ಪ್ರಮಾಣ ವರದಿ: ಶಹಾಪುರ–7.6 ಎಂಎಂ, ಬಿ.ಗುಡಿ–7.2 ಎಂಎಂ, ಗೋಗಿ–7.6 ಎಂಎಂ, ದೋರನಹಳ್ಳಿ–15 ಎಂಎಂ, ಹೈಯ್ಯಾಳ–11.2 ಎಂಎಂ ವಡಗೇರಾ–20 ಎಂಎಂ, ಹತ್ತಿಗೂಡೂರು–25 ಎಂಎಂ ಮಳೆಯಾಗಿರರುವ ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !