ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಜಿಲ್ಲೆಗೆ ಬಾರದ ಸಚಿವ, ಸಂಸದರು!

ಲಾಕ್‌ಡೌನ್‌ ಆದ ನಂತರ ತವರು ಜಿಲ್ಲೆಗಳಲ್ಲಿ ಬಂಧಿಯಾದರು, ಸಭೆಯೂ ಇಲ್ಲ
Last Updated 3 ಏಪ್ರಿಲ್ 2020, 10:40 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಉಸ್ತುವಾರಿ ಸಚಿವ ಬೀದರ್‌ನವರು. ಜಿಲ್ಲೆಯಿಂದ ಆಯ್ಕೆಯಾಗಿರುವ ಇಬ್ಬರು ಸಂಸದರು ಅಕ್ಕಪಕ್ಕದ ಜಿಲ್ಲೆಯವರು. ಒಬ್ಬರು ರಾಯಚೂರಿನವರಾದರೆ, ಮತ್ತೊಬ್ಬರು ಕಲಬುರ್ಗಿಯವರು. ಲಾಕ್‌ಡೌನ್‌ ಬಳಿಕ ಜಿಲ್ಲೆಗೆ ಬಂದು ಅಧಿಕಾರಿಗಳ ಸಭೆ ನಡೆಸಿಲ್ಲ. ಇಲ್ಲಿನ ಪರಿಸ್ಥಿತಿ ಅವಲೋಕಿಸಿಲ್ಲ. ಬುಧವಾರಸಂಸದ ಉಮೇಶ ಜಾಧವ ಅವರು ಮಾತ್ರ ಗುರುಮಠಕಲ್‌ಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ.ಇಬ್ಬರುಬಿಜೆಪಿ ಶಾಸಕರಿದ್ದರೆ, ತಲಾ ಒಂದೊಂದು ಕಡೆ ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿದ್ದಾರೆ. ಆದರೆ, ಒಂದಿಬ್ಬರು ಮಾತ್ರ ಶಾಸಕರು ಅಧಿಕಾರಿಗಳ ಸಭೆ, ಮುಂಜಾಗೃತ ಕ್ರಮಗಳ ಬಗ್ಗೆ ಸಭೆ ಮಾಡಿ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕೆಲವರು ತಮ್ಮ ಮನೆಗಳಲ್ಲಿಯೇ ಬಂಧಿಯಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರು ತವರು ಜಿಲ್ಲೆ ಬೀದರ್‌ ಜಿಲ್ಲೆಯಲ್ಲಿದ್ದಾರೆ. ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ತಮ್ಮ ಕ್ಷೇತ್ರದಲ್ಲಿಯೇ ಉಳಿದುಕೊಂಡಿದ್ದಾರೆ.

ಮನೆ ಬಿಟ್ಟುಬರುವಂತಿಲ್ಲ, ಬರದಿದ್ದರೆ ಅಪಾರ್ಥ:
ಮತಕ್ಷೇತ್ರದ ಶಾಸಕರುಮನೆ ಬಿಟ್ಟುಸಂಚರಿಸಿಲ್ಲ. ಲಾಕ್‌ಡೌನ್‌ ಇರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯ. ಕ್ಷೇತ್ರದ ಪರಿರ್ಯಟನೆಗೆ ಹೊರಟರೆ ಅಭಿಮಾನಿಗಳು, ಮುಖಂಡರು ಜೊತೆಗೆ ಬರುತ್ತಾರೆ. ಇದರಿಂದ ಇದರ ಗೊಡವೇ ಬೇಡ ಎಂದು ಮನೆಯಲ್ಲಿದ್ದರೆ, ಶಾಸಕರು ನಮ್ಮ ಪರಿಸ್ಥಿತಿ ಅವಲೋಕಿಸಲಿಲ್ಲ ಎಂದು ಗ್ರಾಮೀಣ ಜನರು ಅಪಾರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಭಯ ಕಾಡುತ್ತಿದೆ.

ಸಾವಿರಾರು ಅಲೆಮಾರಿಗಳು ಸಂಕಷ್ಟದಲ್ಲಿ:

ಜಿಲ್ಲೆಯ ವಿವಿಧ ಕಡೆಗಳಲ್ಲಿ ವಾಸಿಸುವ ಬುಡಗ ಜಂಗಮ ಸಮುದಾಯವರು ಒಂದೊಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕೂಲಿ ಮಾಡಿದರೆ ಹೊಟ್ಟೆಗೆ ಅನ್ನ. ಇಲ್ಲದಿದ್ದರೆ ಇಲ್ಲ ಎನ್ನುವ ಪರಿಸ್ಥಿತಿ ಅವರದ್ದು.ಇಂಥವರಿಗೂ ಯಾವುದೇ ಸಹಾಯ ಮಾಡದಿರುವುದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಉಪವಾಸದಿಂದ ಸಾಯುತ್ತೇವೆ:

ಕೊರೊನಾ ಭೀತಿಯಿಂದ ಕೆಲಸವೂ ಇಲ್ಲ. ಹಣವೂ ಇಲ್ಲ. ಹೀಗಾಗಿ ಕೊರೊನಾ ಸೋಂಕಿನ ಭೀತಿಯಿಂದ ಅಲ್ಲದೇ ‘ಊಟವಿಲ್ಲದೆ ಹಸಿವಿನಿಂದ ಸಾಯುತ್ತೇವೆ’ ಎನ್ನುತ್ತಾರೆ ಕಾರ್ಮಿಕರು.ಬಡ ವಲಸೆ ಕಾರ್ಮಿಕರು ಮತ್ತು ತಮ್ಮ ದೈನಂದಿನ ಆದಾಯವನ್ನು ಕಳೆದುಕೊಂಡಿದ್ದು, ಅವರಿಗೆಆಡಳಿತಾತ್ಮಕ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕಾಗಿತ್ತು. ಆದರೆ, ಇದ್ಯಾವುದನ್ನು ಜನಪ್ರತಿನಿಧಿಗಳು ಮಾಡುತ್ತಿಲ್ಲ ಎಂದು ಅವರು ಹೇಳುತ್ತಾರೆ.

ವೈದ್ಯಕೀಯ ಕ್ಷೇತ್ರದಲ್ಲಿ, ಸಮರ್ಪಕ ಉಪಕರಣಗಳ ಕೊರತೆ ಬಗ್ಗೆ ಆರೋಗ್ಯ ಸಿಬ್ಬಂದಿಗಳಿಂದ ದೂರು ಬರುತ್ತಿದೆ. ಅವಶ್ಯಕ ಸಂಖ್ಯೆಯ ಟೆಸ್ಟ್ ಕಿಟ್‌ಗಳು ಇನ್ನೂ ಪೂರೈಕೆಯಾಗಿಲ್ಲ. ವೈದ್ಯರು ಮತ್ತು ನರ್ಸ್‌ಗಳಿಗೆ ಅವಶ್ಯಕವಾದ ಎನ್ 95 ಮಾಸ್ಕ್‌, ಮುಖಗವಸು, ಗೌನ್‌, ಕೈಗವಸು, ಇನ್ನಿತರ ಸ್ವಚ್ಛತಾ ಪರಿಕರಗಳು ಮತ್ತು ಇವುಗಳನ್ನು ಸರಿಯಾಗಿ ವಿಲೇವಾರಿ ಮಾಡಲು ಬೇಕಾದಂಥ ಸೌಕರ್ಯಗಳು ಇವೆಲ್ಲವನ್ನೂ ಒಳಗೊಂಡ ವೈಯಕ್ತಿಕ ಸುರಕ್ಷಾ ಸಾಧನಗಳ (ಪಿಪಿಇ) ಗುಣಮಟ್ಟದ ಬಗ್ಗೆಯೂ ವಿರೋಧ ವ್ಯಕ್ತವಾಗುತ್ತಿದೆ.

‘ಇದು ಆಪತ್ತಿನ ಸಮಯ. ಜಾಗೃತಿ ಜೊತೆಗೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಆದರೆ, ಜನಪ್ರನಿಧಿಗಳು ಆರಂಭದಿಂದಲೂ ಎಡವಿದ್ದಾರೆ. ಮಾಡಬೇಕಿದ್ದ ಕೆಲಸ ಮಾಡುತ್ತಿಲ್ಲ.ತೆಲಾಂಗಣ, ಮಹಾರಾಷ್ಟ್ರಗಳಲ್ಲಿ ಸಾವಿರಾರು ಜನರು ಜಿಲ್ಲೆಯವರು ಸಿಲುಕಿದ್ದಾರೆ ಅವರನ್ನು ಮರಳಿ ಗೂಡಿಗೆ ಸೇರುವ ಮನಸು ಮಾಡಬೇಕು. ಬೇರೆ ಜಿಲ್ಲೆಗಳ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಕರೆತರುವ ಕೆಲಸವಾಗಬೇಕು’ ಎನ್ನುತ್ತಾರೆ ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿಕೆ.ಸೋಮಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT