ಸೋಮವಾರ, ಜನವರಿ 18, 2021
27 °C
ಶೇ 12ಕ್ಕಿಂತ ಅಧಿಕ ತೇವಾಂಶವುಳ್ಳ ಹತ್ತಿ ತರಬೇಡಿ: ಶಾಸಕ ಮುದ್ನಾಳ

ಹತ್ತಿ ಖರೀದಿ ಕೇಂದ್ರಕ್ಕೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರೈತರು ಶೇ 8ರಿಂದ 12ರಷ್ಟು ತೇವಾಂಶ ಇರುವ ಹತ್ತಿಯನ್ನು ಮಾರಾಟ ಮಾಡಿದರೆ ಅದಕ್ಕೆ ಅನುಪಾತವಾಗಿ ಹತ್ತಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ ಕಡಿತಗೊಳಿಸಲಾಗುತ್ತಿದೆ. ಹೀಗಾಗಿ ಶೇ12ಕ್ಕಿಂತ ಅಧಿಕ ತೇವಾಂಶ ಇರುವ ಹತ್ತಿಯನ್ನು ತರಬೇಡಿ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

ನಗರದ ಭಾರತೀಯ ಹತ್ತಿ ನಿಗಮ ವತಿಯಿಂದ ರಾಜೇಂದ್ರ ಆಗ್ರೋ ಇಂಡಸ್ಟ್ರೀಸ್‌ ಬಳಿ ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

2020–21ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಧ್ಯಮ ನೂಲುಗೆ ₹5,265 ಕನಿಷ್ಠ ಬೆಂಬಲ ಬೆಲೆ (ಕ್ವಿಂಟಲ್‌ಗೆ) ನೀಡಿ ಖರೀದಿಸಲಾಗುತ್ತಿದೆ. ಮಧ್ಯಮ ಉದ್ದ ನೂಲುಗೆ ₹5,615, ಉದ್ದ ನೂಲಿಗೆ ₹5,725 , ಹೆಚ್ಚುವರಿ ಉದ್ದ ನೂಲಿಗೆ ₹6,225 ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಎಪಿಎಂಸಿ ಕಾರ್ಯದರ್ಶಿ ಸುಮಂಗಲಾ ಹೂಗಾರ ಮಾತನಾಡಿ, ರೈತರು ಹತ್ತಿ ಖರೀದಿ ಕೇಂದ್ರಕ್ಕೆ ಬರುವಾಗ ಸೂಕ್ತ ದಾಖಲಾತಿಗಳನ್ನು ತರಬೇಕು. ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಪುಸ್ತಕ, ಬೆಳೆ ದೃಢಿಕರಣ ಪತ್ರ ಪ್ರತಿಗಳನ್ನು ತಂದು ಹೆಸರು ನೋಂದಾಯಿಸಿಕೊಂಡು ಹತ್ತಿ ಮಾರಾಟ ಮಾಡಬೇಕು
ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು