ಗುರುವಾರ , ಜೂಲೈ 9, 2020
21 °C

ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಭೈರಿಮರಡಿ ಕೆರೆಯ ಮತ್ತು ನಾಲೆಯ ಹೂಳೆತ್ತುವುದರಿಂದ ಅಂತರ್ಜಲ ಹೆಚ್ಚಾಗುತ್ತದೆ. ಇದರಿಂದ ಈ ಭಾಗದ ಜನರಿಗೆ ನೀರಾವರಿ ಮತ್ತು ಕುಡಿಯುವ ನೀರಿಗೆ ಅನುಕೂಲವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ಹೇಳಿದರು.

ತಾಲ್ಲೂಕಿನ ಭೈರಿಮರಡಿ ಗ್ರಾಮದಲ್ಲಿ ಭಾನುವಾರ ಭಾರತೀಯ ಜೈನ್ ಸಂಘಟನೆ ಜಿಲ್ಲಾಡಳಿತದ ಸಹಯೋಗದಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತೀಯ ಜೈನ್ ಸಂಘಟನೆಯ ಈ ಸತ್ಕಾರ್ಯ ಮೆಚ್ಚುವಂಥದ್ದು. ಜೈನ್ ಸಂಘಟನೆ ಇಂತಹ ಅನೇಕ ಪರೋಪಕಾರಿ ಕೆಲಸ ಮಾಡುತ್ತಿದ್ದು, ಜನರ ಸಹಾಯಕ್ಕೆ ನಿಂತಿದೆ’ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀ ದೊಡ್ಡದೇಸಾಯಿ, ಬಿಜೆಪಿ ಮುಖಂಡರಾದ ಬಲಭೀಮನಾಯಕ ಭೈರಿಮರಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ಯಾವಮ್ಮ ಸವಳಪಟ್ಟಿ, ಸಣ್ಣದೇಸಾಯಿ ದೇವರಗೋನಾಲ, ಶರಣುನಾಯಕ ಭೈರಿಮರಡಿ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶನಾಯಕ ಭೈರಿಮರಡಿ, ಎಂಜಿನಿಯರ್ ಸುಭಾನ ಅಲಿ, ಜೈನ್ ಸಂಘಟನೆಯ ತಾಲ್ಲೂಕು ಸಂಯೋಜಕ ವೆಂಕಟೇಶ ದೇವಾಪುರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು