ಗುರುವಾರ , ಜೂನ್ 24, 2021
25 °C
18 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್‌ಗೆ ಚಾಲನೆ ನೀಡಿದ ಶಾಸಕ ವೆಂಕಟರೆಡ್ಡಿ ಮುದ್ನಾಳ

ವಡಗೇರಾ ಸರ್ಕಾರಿ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲು ಶ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ತಾಲ್ಲೂಕು ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದ್ದು, ಚಿಕಿತ್ಸೆಗಾಗಿ ಪಟ್ಟಣದಲ್ಲಿಯೇ ಒಂದು ಕೋವಿಡ್ ಕೇರ್ ಪ್ರಾರಂಭ ಮಾಡಲಾಗಿದ್ದು, ರೋಗಕ್ಕೆ ಒಳಗಾದವರು ಆತಂಕಕ್ಕೆ ಒಳಗಾಗದೇ ಚಿಕಿತ್ಸೆ ಪಡೆಯಬೇಕೆಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ 18 ಆಮ್ಲಜನ ಬೆಡ್‍ಗಳ ಕೋವಿಡ್ ಕೇರ್ ಉದ್ಘಾಟಿಸಿ ಮಾತನಾಡಿದರು.

ಬುಧವಾರ ಯಾದಗಿರಿ ನಗರಕ್ಕೆ ಆಗಮಿಸಿದ್ದ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಇಲ್ಲಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 25 ಬೆಡ್‌ಗಳ ವ್ಯವಸ್ಥೆ ಹಾಗೂ ಅವುಗಳಲ್ಲಿ ಎರಡು ವೆಂಟಿಲೇಟರ್ ಬೆಡ್‌ ವ್ಯವಸ್ಥೆ ಮಾಡಲು ಮನವಿ ಮಾಡಲಾಗಿದ್ದು, ಅರವಳಿಕೆ ತಜ್ಞರ ಕೊರತೆ ಇರುವುದರಿಂದ ವೆಂಟಿಲೇಟರ್ ಬೆಡ್‌ಗಳ ವ್ಯವಸ್ಥೆಗೆ ಸ್ವಲ್ಪ ಕಾಲವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ ಎಂದರು.

ಗ್ರಾ.ಪಂ ಅಧ್ಯಕ್ಷೆ ನರಸಮ್ಮ, ಉಪಾಧ್ಯಕ್ಷ ಅಶೋಕ ಸಾಹು ಕರಣಿಗಿ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್, ತಹಸಿಲ್ದಾರ್ ಸುರೇಶ ಅಂಕಲಗಿ, ಟಿಎಚ್‍ಒ ಡಾ. ರಮೇಶ ಗುತ್ತೇದಾರ, ಪಿಎಸ್‍ಐ ಸಿದ್ದರಾಯ ಬಳೂರ್ಗಿ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್, ಶರಣಗೌಡ ಬಾಡಿಯಾಳ, ಸೂಗರೆಡ್ಡಿಗೌಡ ಪೋಪಾ, ಶಂಕ್ರಣ್ಣ ಸಾಹು ಕರಣಿಗಿ, ವಿರುಪಾಕ್ಷಪ್ಪಗೌಡ ಮಾಚ ನೂರ, ಗೌರಿಸಂಕರ ಹಿರೇಮಠ, ರಾಜಶೇಖರ ಕಾಡಂನೋರ್, ಲಿಂಗರಾಜ ಕೊಡಂಗಲ್, ಪರಶುರಾಮ ಕುರ ಕುಂದಾ, ಯಂಕಣ್ಣ ಬಸವಂತಪುರ, ಡಾ. ಮರಿಯಪ್ಪ ನಾಟೇಕಾರ, ಸೂಗಪ್ಪ ಮಾತ್ಪಳ್ಳಿ, ಅಮೀನರೆಡ್ಡಿ ಹಾಲಗೇರಾ, ಅಮೀನರೆಡ್ಡಿ ಕೊಂಕಲ್, ಮಹ್ಮದ್ ಖುರೇಷಿ, ಶಿವಪ್ಪ ಡುರ್ರೆ, ಸುದರ್ಶನ ನೀಲಹಳ್ಳಿ, ಶಿವು ಗೋನಾಲ, ಮರೆಪ್ಪ ಕೆಇಬಿ, ಅಯ್ಯಪ್ಪ ನಾಟೇಕಾರ, ಮಲ್ಲಪ್ಪ ತೆಲಗರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.