ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಭೀಮ ಘರ್ಜನೆ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

Published 9 ನವೆಂಬರ್ 2023, 16:16 IST
Last Updated 9 ನವೆಂಬರ್ 2023, 16:16 IST
ಅಕ್ಷರ ಗಾತ್ರ

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮ ಘರ್ಜನೆ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಹಾಗೂ ಅಂಗ ಸಂಸ್ಥೆಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ನಡೆಯಿತು.

‌‌‌‌ರಾಜ್ಯ ಸಂಚಾಲಕರ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ, ಪದಾಧಿಕಾರಿಗಳು ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಾರ್ಗದರ್ಶನದಂತೆ ನಡೆಯುವ ಕೆಲಸ ಮಾಡಬೇಕು ಎಂದು ಹೇಳಿದರು.

ಪದಾಧಿಕಾರಿಗಳ ಆಯ್ಕೆ:

ಯಾದಗಿರಿ ಜಿಲ್ಲಾ ಘಟಕ–ಮಾನಪ್ಪ ಕಲ್ಲದೇವನಹಳ್ಳಿ (ಜಿಲ್ಲಾ ಸಂಚಾಲಕ), ರವಿ ಹುಂಡೇಕಲ್, ಮರೆಪ್ಪ ಬೇವಿನಹಳ್ಳಿ, ಎಂ.ಡಿ. ಲಾಲ್ ಸಾಬ ಇಬ್ರಾಹಿಂಪುರ, ಶೇಖಪ್ಪ ಬಸಪ್ಪ ಕಾಡಂಗೇರಾ (ಜಿಲ್ಲಾ ಸಂಘಟನಾ ಸಂಚಾಲಕರು), ಚಿದಾನಂದ ಛಲುವಾದಿ ಹೆಬ್ಬಾಳ ಬಿ. (ಖಜಾಂಚಿ), ಮಲ್ಲಪ್ಪ ಲಂಡನಕರ್ (ನೀಲಿ ಸೇನೆ ಜಿಲ್ಲಾಧ್ಯಕ್ಷ), ಶಾಲಂ ಸಾಬ ಮಹಮ್ಮದ್ ಶರೀಫ್ ಕಾಡಂಗೇರಾ (ಯಾದಗಿರಿ ತಾಲ್ಲೂಕು ಅಲ್ಪಸಂಖ್ಯಾತರ ಘಟಕ ಸಂಚಾಲಕ), ಖಾದರಸಾಬ್‌ ಅಬ್ದುಲ್ ನಜೀರಸಾಬ್‌, ಉಮರಸಾಬ್‌ ಕರೀಂ ಸಾಬ್‌, ಆಶಪ್ಪ ನಿಂಗಪ್ಪ ಕಾಡಂಗೇರಾ (ತಾಲ್ಲೂಕು ಸಂಚಾಲಕರು),

ತಾಲ್ಲೂಕು ಘಟಕ:

ಸಾಜೀದ್ ಅಬ್ದುಲ್ ಖಾದರ್‌ (ಸಂಚಾಲಕ), ಸಾಬರೆಡ್ಡಿ ಇಬ್ರಾಹಿಂಪುರ, ಚಂದ್ರಡ್ಡಿ ಕಾಡಂಗೇರಾ (ಸಂಘಟನಾ ಸಂಚಾಲಕ) ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ನೀಲಿ ಸೇನೆ ರಾಜ್ಯ ಉಪಾಧ್ಯಕ್ಷ ಸದ್ದಾಂ ಹುಸೇನ್, ರಾಜ್ಯ ಸಮಿತಿ ಸದಸ್ಯರಾದ ದೊಡ್ಡಪ್ಪ ಪೂಜಾರಿ ಹುಂಡೇಕಲ್, ವಿಭಾಗೀಯ ಸಂಚಾಲಕ ಮರೆಪ್ಪ ಕನ್ಯೆಕೌಳೂರು, ಶಹಾಪುರ ಸಂಚಾಲಕ ಜೈರೆಡ್ಡಿ, ಹುಣಸಗಿ ಸಂಚಾಲಕ ಶರಣಪ್ಪ ದೊಡ್ಡಮನಿ ಸೇರಿದಂತೆ ಸಮಿತಿ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT