ಶನಿವಾರ, ಜೂನ್ 6, 2020
27 °C
ಚಟ್ನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅವಘಢ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌: ಸಾಮಗ್ರಿ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಾಯ್ಕಲ್ ಸಮೀಪದ ಚಟ್ನಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಚೇರಿಯಲ್ಲಿನ ದಾಖಲಾತಿ ಮತ್ತು ಸಾಮಗ್ರಿಗಳು ಭಸ್ಮಗೊಂಡಿರುವ ಘಟನೆ ಶನಿವಾರ ಸಂಭವಿಸಿದೆ.

ಶಹಾಪುರದಿಂದ ಅಗ್ನಿ ಶಾಮಕದಳ ವಾಹನ ಬರುವಷ್ಟರಲ್ಲಿ ಕಚೇರಿಯ ದಾಖಲಾತಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ಆರಿಸುವಲ್ಲಿ ಗ್ರಾಮಸ್ಥರು ಶ್ರಮಿಸಿದ್ದಾರೆ. ಕೋಣೆಯಲ್ಲಿ ಇಡಲಾದ ಚುನಾವಣೆಯ ಮತದಾನ ವೇಳೆ ವಿಕಲಚೇತನರಿಗೆ ಬಳಕೆಯಾಗುವ ತ್ರಿಚಕ್ರ ಬೈಸಿಕಲ್‍ಗಳು ಬೆಂಕಿಗೆ ಆಹುತಿಯಾಗಿವೆ. ಕಟ್ಟಡದ ಪಕ್ಕದ ಕೋಣೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇದೆ. ಅದೃಷ್ಟವಾಶತ್ ಗ್ರಂಥಾಲಯಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲ.

ಸ್ಥಳಕ್ಕೆ ಶಹಾಪುರ ಠಾಣೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಗೆ ಚಟ್ನಳ್ಳಿ ಗ್ರಾಪಂ ಪಿಡಿಒ ದೂರು ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು