ಮಂಗಳವಾರ, ಜೂನ್ 28, 2022
26 °C

‘ಆಯುರ್ವೇದದಿಂದ ರೋಗ ನಿರೋಧಕ ಶಕ್ತಿ ವೃದ್ಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಈ ಹಿಂದೆ ಕಾಲರಾ, ಪ್ಲೇಗ್‌ ರೋಗ ಸೇರಿದಂತೆ ಹಲವು ಸಾಂಕ್ರಾಮಿಕ ಒಬ್ಬರಿಂದ ಒಬ್ಬರಿಗೆ ರೋಗಗಳನ್ನು ಆಯುರ್ವೇದ ಔಷಧಿ ಸೇವನೆಯಿಂದ ಗುಣಪಡಿಸಲಾಗಿದೆ. ಈಗ ಕೊರೊನಾ ಕಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿಯಾಗಿದೆ‘ ಎಂದು ಆಯುಷ್‌ ವೈದ್ಯ ಡಾ.ಪ್ರಮೋದ ಕುಲಕರ್ಣಿ ಹೇಳಿದರು.

ನಗರದ ಪ್ರತಿಕಾ ಭವನದಲ್ಲಿ ಬುಧವಾರ ಪತ್ರಕರ್ತರಿಗೆ ಇಲಾಖೆಯಿಂದ ಔಷಧಿಗಳ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದ ದೇಶದಲ್ಲಿ ಆಯುರ್ವೇದ ಔಷಧಿಗಳ ಬಳಕೆ ಪದ್ಧತಿಯಿಂದ ಇಡೀ ಮನುಕುಲ ಹಲವಾರು ರೋಗಗಳಿಂದ ಮುಕ್ತಿ ಹೊಂದಿದೆ. ಕೊರೊನಾ ವೈರಸ್‌ ದಾಳಿ ಸಮಯದಲ್ಲಿ ಜನರು ಔಷಧಿಗಳನ್ನು ಬಳಕೆ ಮಾಡಿಕೊಳ್ಳುವುದರಿಂದ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅಭಿಪ್ರಾಯಿಸಿದರು.

ವೈದ್ಯರಾದ ಡಾ. ಮಂಜುನಾಥ, ಡಾ. ಶಿವಲಿಂಗಪ್ಪ ಪಾಟೀಲ, ನಾಗರಾಜ ಕೆಂಭಾವಿ, ಸಂಗಮೇಶ ಕೆಂಭಾವಿ ಹಾಗೂ ಪ್ರಮುಖರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು