ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಯೊಬ್ಬರೂ ಗಿಡ ನೆಡಿ’

Last Updated 10 ಫೆಬ್ರುವರಿ 2021, 11:26 IST
ಅಕ್ಷರ ಗಾತ್ರ

ಯರಗೋಳ: ‘ಗಿಡ ನೆಡುವ ಮೂಲಕ ಪ್ರತಿಯೊಬ್ಬರೂ ಪ್ರಕೃತಿಗೆ ಕೊಡುಗೆ ನೀಡಬೇಕು’ ಎಂದು ಮುಖ್ಯಶಿಕ್ಷಕ ಆಶಪ್ಪ ಮುಂಡರಗಿ ಸಲಹೆ ನೀಡಿದರು.

ಇಕೋ ಕ್ಲಬ್ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಹಸಿರು ಪಡೆ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಿದ ಕಾರಣ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ತಾಪಮಾನ ಹೆಚ್ಚುತ್ತಿದೆ. ಆದ್ದರಿಂದ ಹೆಚ್ಚು ಗಿಡಗಳನ್ನು ಬೆಳೆಸಬೇಕು’ ಎಂದರು.

‘ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ ಸುಧಾರಣೆಗೆ ಇಂಥ ಕಾರ್ಯಕ್ರಮಗಳು ಪೂರಕ’ ಎಂದು ತಿಳಿಸಿದರು.

ವಿಜ್ಞಾನ ಶಿಕ್ಷಕಿ ಖೈರುನ್ನಿಸ ಮಾತನಾಡಿ, ‘ನಗರೀಕರಣದಿಂದಾಗಿ ಪರಿಸರ ನಾಶವಾಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ’ ಎಂದರು.

ಕೋವಿಡ್ ಜಾಗೃತಿ, ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರಾದ ನಶೀಮಾ ಪ್ರಥಮ, ಮಹಾಲಕ್ಷ್ಮಿ ದ್ವಿತೀಯ ಬಹುಮಾನ ಪಡೆದರು.

ಸಮಾರಂಭದಲ್ಲಿ ಶಿಕ್ಷಕಿಯರಾದ ಸುಮಾ ಎಚ್‌, ಪುಷ್ಪಾ, ಕಲ್ಪನಾ, ವಿಶಾಲಾಕ್ಷಿ, ರಾಜೇಶ್ವರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಶಂಕರಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT