ಗುರುವಾರ , ಜುಲೈ 29, 2021
21 °C
ಮನೆಗಳ ಮುಂದೆ, ಹೊಲಗಳ ಬದುಗಳಲ್ಲಿ ಸಸಿ ನೆಡಲು ಮನವಿ

ವಿವಿಧೆಡೆ ಪರಿಸರ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಸಸಿನೆಟ್ಟು ದಿನಾಚರಣೆ ಆಚರಿಸಿದರು.

ಸಮಾಜ ಕಲ್ಯಾಣ ಇಲಾಖೆ: ಸಮಾಜ ಕಲ್ಯಾಣ ಇಲಾಖೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ವಸತಿ ನಿಲಯಗಳಲ್ಲಿ ಸಸಿ ನೆಡುವ ಮೂಲಕ ಆಚರಣೆ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್‌.ಎಸ್‌.ಚನ್ನಬಸವ, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಕೆ.ಆರ್.ನಾಡಗೌಡ ಕಾಲೇಜು: ನಗರದ ಅಶೋಕ ನಗರದಲ್ಲಿ ಕೆ.ಆರ್.ನಾಡಗೌಡ ಸಾಮಾಜಿಕ ಕಾರ್ಯ ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ ಆಚರಿಸಲಾಯಿತು. ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

‘ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರ ನಾಶದಿಂದಲೇ ಪ್ರಕೃತಿ ವಿಕೋಪ ಹೆಚ್ಚಾಗುವುದರ ಜೊತೆಗೆ ಹಲವಾರು ಮಹಾಮಾರಿ ರೋಗಗಳು ಹರಡುತ್ತಿವೆ. ಆದ್ದರಿಂದ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ, ಹೊಲಗಳ ಬದುಗಳಲ್ಲಿ ಸಸಿಗಳನ್ನು ನೆಡಬೇಕು’ ಎಂದು ಸಲಹೆ ನೀಡಿದರು.

ಈ ವೇಳೆ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ನಾಯಕ, ರಾಜಪ್ಪ ಕೊನಿಮನಿ, ಡಾ. ಭೀಮರಾಯ ಲಿಂಗೇರಿ, ಜಗದೀಶ ನೂಲಿನವರ ಮತ್ತು ಉಪನ್ಯಾಸಕರಾದ ಮೋನಪ್ಪ ಗಚ್ಚಿನಮನಿ, ನಾಗರಾಜ ಬೀರನೂರ, ಹಣಮಂತ ವಲ್ಲೆಪುರ, ವೆಂಕಟೇಶ ನಾಯಕ, ವಿಧ್ಯಾರ್ಥಿಗಳಾದ ಮಲ್ಲಪ್ಪ, ನಿಂಗಣ್ಣ ಜಡಿ, ಮಲ್ಲಿಕಾರ್ಜುನ ವರ್ಕನಳ್ಳಿ, ಸಣ್ಣಮೀರ ನಾಯಕ, ಅವಿನಾಶ, ಶಾಂತ, ಮಂಜುಳಾ, ಪೂಜಾ, ಭವಾನಿ ದೊಡ್ಡಮನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು