ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ರೋಗಿಗಳ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ

ಶಾಸಕ ರಾಜೂಗೌಡ ಜನ್ಮದಿನ
Last Updated 29 ಡಿಸೆಂಬರ್ 2022, 4:39 IST
ಅಕ್ಷರ ಗಾತ್ರ

ಸುರಪುರ: ಶಾಸಕ ರಾಜೂಗೌಡ ಅವರ ಜನ್ಮ ದಿನದ ಅಂಗವಾಗಿ ಸೋಮವಾರ ಹುಣಸಗಿ ಮತ್ತು ಮಂಗಳವಾರ ಸುರಪುರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಒಟ್ಟು 1700 ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು.

205 ಜನ ರಕ್ತದಾನ ಮಾಡಿದರು. ಈ ಪೈಕಿ ವೈದ್ಯರ ಸಲಹೆ ಮೇರೆಗೆ ವಿವಿಧ ಕಾಯಿಲೆಗೆ ಸೇರಿದ 60 ಜನ ರೋಗಿಗಳ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರೆಲ್ಲರನ್ನು ಕಲಬುರಗಿ ಮತ್ತು ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಕೊಡಿಸಲಾಗುವುದು ಎಂದು ಶಾಸಕರಾದ ರಾಜೂಗೌಡ ಅವರು ತಿಳಿಸಿದರು.

‘ನನ್ನ ಜನ್ಮದಿನವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅಭೂತ ಪೂರ್ವವಾಗಿ ಆಚರಿಸಿದ್ದು ನನ್ನನ್ನು ಪುಳಿಕತನನ್ನಾಗಿಸಿದೆ. ನನ್ನ ಜೀವಮಾ ನದವರೆಗೂ ಕ್ಷೇತ್ರದ ಜನರ ಸೇವೆ ಸಲ್ಲಿಸಿ ಋಣ ತೀರಿಸುವೆ’ ಎಂದು ಭಾವುಕರಾಗಿ ನುಡಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಗಂವ್ಹಾರದ ಸೋಪಾನನಾಥ ಸ್ವಾಮೀಜಿ, ನಾಲವಾರದ ತೋಟೇಂದ್ರ ಶಿವಾಚಾರ್ಯ, ದೇವಪುರದ ಶಿವಮೂರ್ತಿ ಶಿವಾಚಾರ್ಯ, ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮೀಜಿ, ಗುಳಬಾಳ ಮರಿಹುಚ್ಚೇಶ್ವರ, ಅಗತೀರ್ಥದ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ, ಲಕ್ಷ್ಮೀಪುರ ಶ್ರೀಗಿರಿ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಕೆಂಭಾವಿಯ ಚನ್ನಬಸವ ಶಿವಾಚಾರ್ಯ, ರುಕ್ಮಾಪುರದ ಗುರುಶಾಂತಮೂರ್ತಿ ಶಿವಾಚಾರ್ಯ, ಮುದ್ನೂರಿನ ಗಿರಿಧರ ಪಂಡಿತಾರಾಧ್ಯ. ಕಂಠಿ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕೊಡೇಕಲ್ ವೃಷಬೇಂದ್ರಸ್ವಾಮೀಜಿಜಿ, ಕಕ್ಕೇರಿಯ ನಂದಣ್ಣಪ್ಪ ಮುತ್ಯಾ, ವಜ್ಜಲ್‍ದ ವಿಠ್ಠಲ ಮಹಾರಾಜ, ದೇವತ್ಕಲ್ ಸಾಯಿಬಣ್ಣ ತಾತಾ, ಬಲಶೆಟ್ಟಿಹಾಳದ ಸಿದ್ದಯ್ಯಸ್ವಾಮೀಜಿ ಇತರ ಮಠಾಧೀಶರು ಶಾಸಕ ರಾಜೂಗೌಡ ಹಾಗೂ ಅವರ ಸಹೋದರ ಬಬ್ಲೂಗೌಡ ಅವರನ್ನು ಆಶೀರ್ವದಿಸಿದರು.

ಮಾಸ್ಟರ್ ಆನಂದ, ಅಮರ ಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಚಿತ್ರನಟ ಶರಣ್, ಪ್ರೇಮ್, ಗಾಯಕರಾದ ಶಮಿತಾ ಮಲ್ನಾಡ್ ಹಾಗೂ ರಾಜೇಶ್ ಕೃಷ್ಣನ್ ಇತರರು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಮುಖಂಡರಾದ ದಯಾನಂದ, ರಾಜಾ ಜೀತೇಂದ್ರನಾಯಕ, ಸುರೇಶ್ ಸಜ್ಜನ್, ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರುಕುಂದಿ, ಬಸನಗೌಡ ಯಡಿಯಾಪುರ, ಮರಿಲಿಂಗಪ್ಪ ಕರ್ನಾಳ, ಪ್ರಕಾಶ ಸಜ್ಜನ್, ಗ್ಯಾನಚಂದ ಜೈನ್, ಕಿಶೋರಚಂದ ಜೈನ್, ಎಚ್.ಸಿ.ಪಾಟೀಲ ಹಾಗೂ ಬಿ.ಎಂ.ಹಳ್ಳಿಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT